Site icon Ullalavani

ಗಿಡಮರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ :ಡಾ| ವಿ. ಕರಿಕಲನ್

UN NETWORKS

ದೇರಳಕಟ್ಟೆ: ಪ್ರಸ್ತುತ ತಲೆಮಾರಿನ ಗಿಡಮರಗಳನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ಪರಿಸರ ಉಳಿಸುವುದರೊಂದಿಗೆ ಮರಗಿಡಗಳನ್ನು ಉಳಿಸಿ ಬೆಳಸುವ ಕಾರ್ಯ ಆಗಬೇಕು ಎಂದು ಮಂಗಳೂರು ಉಪ ವಿಭಾಗದ ಮುಖ್ಯ ಅರಣ್ಯಾಧಿಕಾರಿ ಡಾ| ವಿ. ಕರಿಕಲನ್ ಅಭಿಪ್ರಾಯಪಟ್ಟರು.

ನಿಟ್ಟೆ ವಿಶ್ವವಿದ್ಯಾನಿಲಯದ ಪಾನೀರು ಕ್ಯಾಂಪಸ್‍ನಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗ್ರೀನ್ ಇನಿಶಿಯೇಟಿವ್ ಪ್ರಾಜೆಕ್ಟ್(ಎನ್‍ಯುಜಿಐಪಿ) ಕಾರ್ಯಕ್ರಮಕ್ಕೆ ಚಾಲನೆ ಮತ್ತು ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಇನ್‍ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಇದರ ಆಶ್ರಯದಲ್ಲಿ ಅಭಿವೃದ್ಧಿ ಪಡಿಸಲಾದ `ಜೀವಂತಿಕ` ಗಿಡಮೂಲಿಕಾ ಉದ್ಯಾನವನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ| ಎಂ.ಎಸ್. ಮೂಡಿತ್ತಾಯ ಅಧ್ಯಕ್ಷತೆ ವಹಿಸಿ ನಿಟ್ಟೆ ವಿಶ್ವವಿದ್ಯಾನಿಲಯವನ್ನು ಹಸಿರು ಕ್ಯಾಂಪಸ್ ಆಗಿ ಅಭಿವೃದ್ಧಿಪಡಿಸುತ್ತಿದ್ದು ಕಳೆದ ವರ್ಷ 400 ಗಿಡಗಳನ್ನು ನೆಟ್ಟಿದ್ದು, 200ರಷ್ಟು ಸ್ಥಳೀಯ ಗಿಡಗಳನ್ನು ನಾಟಿ ಮಾಡಲಾಗಿದೆ. ಒಟ್ಟು 1500 ಗಿಡ ಮರಗಳನ್ನು ಗುರುತಿಸಲಾಗಿದ್ದು, 200ಕ್ಕೂ ಅಧಿಕ ಔಷದಿಯ ಗಿಡಗಳು ಕ್ಯಾಂಪಸ್‍ನಲ್ಲಿದ್ದು, ಸಂಶೋಧನಾ ಚಟುವಟಿಕೆಗಳಿಗೆ ಪೂರಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದೇರಳಕಟ್ಟೆಯ ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಡೀನ್ ಡಾ| ಯು.ಎಸ್.ಕೃಷ್ಣನಾಯಕ್, ಅರಣ್ಯ ಇಲಾಖೆಯ ಅಧಿಕಾರಿಗಳಾದ ಶ್ರೀಧರ್ ಪಿ., ರವಿ ಕುಮಾರ್, ಸೌಮ್ಯಾ ಎಸ್., ಸುಕುಮಾರ್ ಉಪಸ್ಥಿತರಿದ್ದರು. ಡಾ| ಸ್ಮಿತಾ ಹೆಗ್ಡೆ ವಂದಿಸಿದರು. ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಇನ್‍ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಪ್ರಾಂಶುಪಾಲ ಪ್ರೊ| ಸಿ.ಎಸ್. ಶಾಸ್ತ್ರಿ ಸ್ವಾಗತಿಸಿದರು.

Exit mobile version