UN NETWORKS
ಉಳ್ಳಾಲ: ನಾಡಿನ ಸಾಮರಸ್ಯವನ್ನು ಉಳಿಸುವ ಭವಿಷ್ಯದ ಪ್ರಜೆಗಳಾಗಿ ವಿದ್ಯಾರ್ಥಿಗಳು ಬದಲಾಗಬೇಕು ಶಿಕ್ಷಣದೊಂದಿಗೆ ದೇವ ನಿಯವಿರುವವರಾಗಬೇಕು ಎಂದು ಜಮಾಅತೇ ಇಸ್ಲಾಮಿ ಉಳ್ಳಾಲ ಘಟಕದ ಉಪಾಧ್ಯಕ್ಷ ಅಬ್ದುಲ್ ರಹೀಂ ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿದ ಸಂಶೋಧಕ ಡಾ| ಮುಹಮ್ಮದ್ ಮುಬೀನ್ ಮಾತನಾಡಿ ವಿದ್ಯಾವಂತರಾಗಿ ಬೆಳೆಯಲು ಎಸ್ ಐ ಓ ಉತ್ತಮ ವೇದಿಕೆ ಪಿ ಎಚ್ ಡಿ ಪದವಿಗಳಿಸುವುದು ಹಲವು ಕಾಲದ ಕನಸ್ಸಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಕಠಿಣಪರಿಶ್ರಮ ಮತ್ತು ತ್ಯಾಗ ಅತ್ಯಗತ್ಯ. ಇಂದಿನ ವಿಜ್ಞಾನ ಯುಗ ಬೆಳೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ನಾವು ಬೆಳೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಜಮಾಅತೇ ಇಸ್ಲಾಮಿ ಉಳ್ಳಾಲ ಘಟಕದ ಅಧ್ಯಕ್ಷ ಅಬ್ದುಲ್ ಕರೀಮ್, ತೊಕ್ಕೊಟ್ಟು ಘಟಕದ ಅಧ್ಯಕ್ಷ ನಿಝಾಮ್ ಉಳ್ಳಾಲ, ಅನಿವಾಸಿ ಭಾರತೀಯರಾದ ಮುಶರಫ್ ಬಬ್ಬುಕಟ್ಟೆ, ಗುಲ್ಶನ್, ಸಂಚಾಲಕ ಮುಝಮ್ಮಲ್,ಉಪಸ್ಥಿತರಿದ್ದರು.
ಎಸ್ ಐ ಓ ಉಳ್ಳಾಲ ಘಟಕದ ಅಧ್ಯಕ್ಷ ಅಶೀರುದ್ದೀನ್ ಸ್ವಾಗತಿಸಿ ಪ್ರಾಸ್ತವನೆಗೈದರು. ವಾಸಿಫ್ ವಂದಿಸಿದರು.