Site icon Ullalavani

ಉಪ್ಪಳದಲ್ಲಿ ಭೀಕರ ರಸ್ತೆ ಅಪಘಾತ : ತಲಪಾಡಿ ಕೆ.ಸಿ.ರೋಡಿನ ಐವರು ಮೃತ್ಯು

UN NETWORKS

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಉಪ್ಪಳ ಸಮೀಪದ ನಯಬಝಾರ್‌ನಲ್ಲಿ ಇಂದು ಬೆಳಗ್ಗೆ ಲಾರಿ ಮತ್ತು ತೂಫಾನ್ ಜೀಪ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರ ಸಹಿತ ಐವರು ಮೃತಪಟ್ಟು, 8 ಮಂದಿ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಮೃತಪಟ್ಟವರನ್ನು ತಲಪಾಡಿ ಸಮೀಪದ ಕೆ.ಸಿ.ರೋಡ್ ನಿವಾಸಿಗಳೆಂದು ಗುರುತಿಸಲಾಗಿದೆ.

ಕೆ.ಸಿ. ರೋಡ್ ಸಮೀಪದ ಅಜ್ಜಿನಡ್ಕ ಸಾಮನಿಗೆ ನಿವಾಸಿಗಳಾದ ಬೀಫಾತಿಮಾ(65), ಅಸ್ಮಾ(30), ನಸೀಮಾ(38), ಮುಸ್ತಾಕ್(41) ಹಾಗೂ ಇಮ್ತಿಯಾಝ್(35) ಮೃತಪಟ್ಟವರಾಗಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಸಿ.ಎಚ್.ಸಿ. ಶವಾಗಾರದಲ್ಲಿರಿಸಲಾಗಿದೆ. ಜೀಪಿನಲ್ಲಿದ್ದ ಉಳಿದ 8 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೀಪಿನಲ್ಲಿದ್ದವರು ಪಾಲಕ್ಕಾಡಿನಲ್ಲಿ ಗೃಹ ಪ್ರವೇಶ ಕಾರ್ಯಕ್ರಮವೊಂದಕ್ಕೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಈ ಅಪಫಾತ ಸಂಭವಿಸಿದೆ. ಇವರಿದ್ದ ಜೀಪಿಗೆ ಕಾಸರಗೋಡು ಕಡೆ ತೆರಳುತ್ತಿದ್ದ ಲಾರಿ ನಯಬಝಾರ್‌ನಲ್ಲಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಲಾರಿ ಟಯರ್ ಸಿಡಿದದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Exit mobile version