Site icon Ullalavani

ಶಾರದಾ ಆರ್ಟ್ಸ್ ಮಂಜೇಶ್ವರ `ಇತ್ತ್ ನಾತ್ ದಿನ’ `ಬಂಜಿಗ್ ಹಾಕೊಡ್ಚಿ’ ನಾಟಕಕ್ಕೆ ಮುಹೂರ್ತ

UN NETWORKS

ತಲಪಾಡಿ: ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಅಭಿನಯಿಸುವ `ಇತ್ತನಾತ್ ದಿನ’ ಮತ್ತು ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸುವ ಬಂಜಿಗ್ ಹಾಕೊಡ್ಚಿ ನಾಟಕಗಳ ಶುಭ ಮುಹೂರ್ತವು ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಭಯ, ಭಕ್ತಿ, ಶ್ರದ್ಧೆ, ಶಿಸ್ತು, ಸಮಯ ಪ್ರಜ್ಞೆಗಳಿಂದ ಕಲಾವಿದರು ರಂಗಭೂಮಿಯಲ್ಲಿ ಕಲಾಸೇವೆ ಮಾಡಿದರೆ ಎಂದು ಸೋಲಾಗದು. ಉನ್ನತ ಶಿಬಿರಕ್ಕೆ ಏರಿ ಸಮಾಜ ಮುಖಿಯಾಗುವನು. ತುಳುನಾಡಿನಲ್ಲಿ ಅಳಿಸಿ ಹೋಗುವ ತುಳು ಸಂಸ್ಕೃತಿಯನ್ನು ಉಳಿಸುವಲ್ಲಿ ಪಾತ್ರರಾಗಬೇಕು.
ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಶ್ರೀ ಮಹಾಬಲ ಸ್ವಾಮೀಜಿಯವರು ನಾಟಕವೆಂದರೆ ಸಮಾಜದ ಕನ್ನಡಿ ಇದ್ದಂತೆ. ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸುವಲ್ಲಿ ಕಲಾವಿದರ ಕಲಾ ಸೇವೆಯ ಶ್ರಮ ಮೆಚ್ಚುವಂತದ್ದು, ಅಂತಹ ಸಂದೇಶಗಳನ್ನು ನೀಡಿ ಕಳೆದ 19 ವರ್ಷಗಳಿಂದ ಶಾರದಾ ಮತ್ತು ಐಸಿರಿ ಕಲಾವಿದರು ಸಮಾಜದಲ್ಲಿ ಮನೆ ಮಾತಾಗಿದ್ದಾರೆ.

ಸಮಾರಂಭದ ಅಧ್ಯಕ್ಷರಾಗಿ ಮುದ್ದು ಮೂಡು ಬೆಳ್ಳೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಲಕ್ಷಣ ಕುಮಾರ್ ಮಲ್ಲೂರು, ವಿಜಯ್ ಕುಮಾರ್ ಕೊಡಿಯಾಲ್‍ಬೈಲ್, ಭೋಜರಾಜ್ ವಾಮಂಜೂರು, ನಾರಾಯಣ ಪೂಜಾರಿ ಅರಿಯಾಳ ತರವಾಡು, ತಿಮ್ಮಪ್ಪ ಕಾಮಜರು ಉದ್ಯಾವರ ಮಾಡ, ಚಲನಚಿತ್ರ ನಟರಾದ ರಾಜ್ ಬಿ ಶೆಟ್ಟಿ, ಶೋಭರಾಜ್ ಮಂಗಳೂರು, ಸುಹಾನ್ ಪ್ರಸಾದ್ ಅಸ್ಲರ್ ಮುಡಿಪು, ಪ್ರೇಮ್ ಶೆಟ್ಟಿ ಮುಂಬಯಿ, ಪಧ್ಮನಾಭ ಕಡಪ್ಪರ, ಜೀನ್ ಲವಿನಾ ಮೊಂತೆರೋ ಮಂಜೇಶ್ವರ, ಎಸ್. ಎನ್. ಕಡಂಬಾರು, ದೀಪಕ್ ರೈ ಪಾಣಾಜೆ, ಕೃಷ್ಣ. ಜಿ. ಮಂಜೇಶ್ವರ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ದು ಉಚ್ಚಿಲ ರಂಗಾಯಣ ಇವರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಕಲಾವಿದ ಸುಂದರ್ ರೈ ಮಂದಾರ ಸ್ವಾಗತಿಸಿದರು. ಸೋಮನಾಥ ಶೆಟ್ಟಿ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ವಿಜಯ್ ಮಯ್ಯ ಐಲ ವಂದಿಸಿದರು.

Exit mobile version