Site icon Ullalavani

ಅಂಬ್ಲಮೊಗರು : ಜನಸೇವಾ ಯುವಕ ಮಂಡಲದಿಂದ ಆರೋಗ್ಯ ಕಾರ್ಡ್ ವಿತರಣೆ

UN NETWORKS

ಉಳ್ಳಾಲ:ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ ಹೀಗಾಗಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಯುವಕ ಮಂಡಲ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಅಂಬ್ಲಮೊಗರು ಜನಸೇವಾ ಯುವಕ ಮಂಡಲ ಅಂಬ್ಲಮೊಗರುವಿನ ಕಾರ್ಯಾಲಯದಲ್ಲಿ ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಆರೋಗ್ಯ ಕಾರ್ಡ್ ವಿತರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜನರ ಆರೋಗ್ಯ ಕಾಳಜಿಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತುತ್ತಿರುವ ಜನಸೇವಾ ಯುವಕ ಮಂಡಲದ ಕಾರ್ಯ ಶ್ಲಾಘನೀಯ.ಯುವಕ ಮಂಡಲದ ಸಹಕಾರದಿಂದ ಕೊಡ ಮಾಡುವ ಜಸ್ಟೀಸ್ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಈ ಆರೋಗ್ಯ ಕಾರ್ಡ್‍ನ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳುವಂತಾಗಬೇಕು ಎಂದರು.

ಅಂಬ್ಲಮೊಗರು ಜನಸೇವಾ ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಶೆಟ್ಟಿ ಅಂಬ್ಲಮೊಗರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಗೌರವ ಸಲಹಾಗಾರ ಎ.ವಿಜಯ ಮತ್ತು ಮಾಜಿ ಅಧ್ಯಕ್ಷರುಗಳಾದ ಜಯಶೀಲ ಶೆಟ್ಟಿ ಪಡ್ಯಾರಮನೆ, ಮತ್ತು ಸ್ಟೀವನ್ ಕ್ರೂಜ್ ಭಾಗವಹಿಸಿದ್ದರು. ಇದೇ ವೇಳೆ ಸಂಘದ ಪಧಾದಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಇದರ ಪ್ರಯೋಜನ ಪಡೆದರು. ಮಾಜಿ ಅಧಕ್ಷ ಸುರೇಶ್ ಶೆಟ್ಟಿ ಪಡ್ಯಾರಮನೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ ಪಡ್ಯಾರ ಮನೆ ವಂದಿಸಿದರು, ಕೆ,ಲಕ್ಷ್ಮೀನಾರಾಯಣ ರೈ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

Exit mobile version