Site icon Ullalavani

ಅಲ್‍ ಇಂಡಿಯಾ ಐಡಿಯಲ್‍ ಟೀಚರ್ಸ್ ಎಸೋಸಿಯೇಶನ್ ವತಿಯಿಂದ ಶೈಕ್ಷಣಿಕ ಕಾರ್ಯಗಾರ ಹಾಗೂ ಸನ್ಮಾನ ಕಾರ್ಯಕ್ರಮ

UN NETWORKS

ಮಂಗಳೂರು: ಅಲ್‍ ಇಂಡಿಯಾ ಐಡಿಯಲ್‍ ಟೀಚರ್ಸ್ ಎಸೋಸಿಯೇಶನ್, ದಕ್ಷಿಣಕನ್ನಡ ಜಿಲ್ಲೆ ಇದರ ವತಿಯಿಂದ ಆಯೋಜಿಸಲಾದ ಶೈಕ್ಷಣಿಕ ಕಾರ್ಯಗಾರ ಹಾಗೂ ಸನ್ಮಾನ ಕಾರ್ಯಕ್ರಮ ಮಂಗಳೂರಿನ ಜಮಿಯ್ಯಾತುಲ್ ಫಲಾಹ್ ಸಭಾಂಗಣದಲ್ಲಿ ಜರುಗಿತು.

ಕಾರ್ಯಾಗಾರಕ್ಕೆ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಜ.ಅಬ್ದುಲ್‍ಖಾದರ್ ಪ್ರಾಂಶುಪಾಲರು, ಕರ್ನಾಟಕ ಸರಕಾರಿ ಸಂಧ್ಯಾ ಪಾಲಿಟೆಕ್ನಿಕ್, ಮಂಗಳೂರು “ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವಾಗ ಯಾವೆಲ್ಲಾ ವಿಷಯಗಳನ್ನು ಗಮನದಲ್ಲಿಡಬೇಕು ಎಂಬುದರ ಬಗ್ಗೆ ಪಿ.ಪಿ.ಟಿ ಪ್ರಸಂಟೇಶನ್ ಮೂಲಕ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಶಿಕ್ಷಕರು ಸ್ವಾರ್ಥಚಿಂತನೆಗೆಕಟ್ಟು ಬೀಳದೆ ಇತರರ ದೃಷ್ಟಿಕೋನವನ್ನು ಒಪ್ಪಿಕೊಂಡು ಕಲಿಕೆಯ ವಿಧಾನವನ್ನು ಅನುಕರಿಸಬೇಕು ಎಂದರು.
ಕಾರ್ಯಕ್ರಮವನ್ನು ನಾಗರಾಜಪ್ಪ, ಪಿ.ಯು ಇಲಾಖೆ ಉಪನಿರ್ದೇಶಕರವರು ಉದ್ಘಾಟಿಸಿ ಶಿಕ್ಷಕರ ಗುರಿ ಹಾಗೂ ಜವಬ್ದಾರಿಯ ಬಗ್ಗೆ ಶಿಕ್ಷಕರಿಗೆ ಉಪಯುಕ್ತ ಮಾಹಿತಿ ನೀಡಿದರು. ನಿವೃತ್ತ ಹೊಂದಿರುವ ಬದ್ರಿಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್‍ ಇಸ್ಮಾಯಿಲ್‍ ರವರನ್ನು ಸನ್ಮಾಯಿಸಲಾಯಿತು.ಜೊತೆಗೆ ಪಿಹೆಚ್ ಪಡೆದಡಾ ಮುಬೀನ್ ಉಳ್ಳಾಲ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕಿ ಶಹನಾಜ್‍ಭಾನು(ನಿವೃತ್ತಿ ಮುಖ್ಯೋಪಾಧ್ಯಾಯಿನಿ ಬದ್ರಿಯಾ ಪ್ರಾಥಮಿಕ ಶಾಲೆ) ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ. ಮುಖ್ತಾರ್ ಅಹ್ಮದ್‍ಖೊತ್ವಾಲ್‍ ಅಧ್ಯಕ್ಷರು AIITA ಕರ್ನಾಟಕರವರು ವಹಿಸಿ ,ಶಿಕ್ಷಕರಿಗೆ ಮಾದರಿ ಶಿಕ್ಷಣದ ಬಗ್ಗೆ ಕರೆ ನೀಡಿದರು.

ಜ. ಯೂಸುಫ್‍ ಉಸ್ತಾದ್‍ರವರು ಕಿರಾಅತ್ ಪಠಿಸಿದರು. ಜ. ಅಮಾನುಲ್ಲಾಖಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಜ.ರಹ್ಮತ್ತುಲ್ಲಾರವರು ಸ್ವಾಗತಿಸಿದರು. ಜ.ಯೂಸುಫ್ ಡಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.

Exit mobile version