UN NETWORKS
ಉಳ್ಳಾಲ: ಸಿದ್ದರಾಮಯ್ಯ ನೀಡಿದ ಜನವಿರೋದಿ ಆಡಳಿತ ಮತ್ತು ನರೇಂದ್ರ ಮೋದಿಯವರ ಅಭಿವೃದ್ಧಿ ಪರ ಆಡಳಿತದ ಪರಿಣಾಮ ಕರ್ಣಾಟಕದ ಚುನಾವಣೆಯಲ್ಲಿ ಬಿ.ಜೆ.ಪಿ. ಗೆ ಜನಾರ್ಶೀವಾದ ದೊರೆತಿದೆ. ಆದರೆ ಕಾಂಗ್ರೇಸ್ ಮತ್ತು ಜೆ.ಡಿ.ಎಸ್. ನ ಕುಟಿಲ ರಾಜಕೀಯದಿಂದ ಆಡಳಿತ ಕೈ ತಪ್ಪಿದೆ. ಆದರೆ ಕೆಲವೇ ದಿನಗಳಲ್ಲಿ ಆಂತರಿಕ ಕಚ್ಚಾಟದಿಂದಾಗಿ ಈ ಸರಕಾರ ಪತನ ಗೊಳ್ಳಲಿದೆ. ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಫಲಿತಾಂಶದಲ್ಲಿ ಸೋತಿರಬಹುದು ಆದರೆ ಮತಗಳಿಕೆಯಲ್ಲಿ ಗೆದ್ದಿದೆ. ಮುಂದೆ ಕ್ಷೇತ್ರದಲ್ಲಿ ಬಿ.ಜೆ.ಪಿ. ಶಾಸಕ ಆಯ್ಕೆಯಾಗುವುದರಲ್ಲಿ ಸಂಶಯವಿಲ್ಲ. ಕಾರ್ಯಕರ್ತರು ಮುಂದೆ ಬರಲಿರುವ ಲೋಕಸಭಾ ಚುನಾವಣೆಗೆ ಸಿದ್ದರಾಗಬೇಕು ಕ್ಷೇತ್ರದಿಂದ ಅತೀ ಹೆಚ್ಚು ಮತ ಗಳಿಸಲು ಕಾರ್ಯ ತಂತ್ರ ರೂಪಿಸಬೇಕೆಂದು ದ.ಕ.ಜಿಲ್ಲಾ ಬಿ.ಜೆ.ಪಿ. ಪ್ರ.ಕಾರ್ಯದರ್ಶಿ ಸುದರ್ಶನ್ ಎಮ್. ಹೇಳಿದರು.
ಕ್ಷೇತ್ರ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಪ್ರಭಾರಿ ರಾಮಚಂದ್ರ ಬೈಕಾಂಪಾಡಿ, ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಹಾಸ ಉಳ್ಳಾಲ, ಹಿರಿಯರಾದ ಸೀತರಾಮ ಬಂಗೇರ, ಚಂದ್ರಶೇಖರ ಉಚ್ಚಿಲ್ ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮನೋಜ್ ಆಚಾರ್ಯ ವಂದಿಸಿದರು.