UN NETWORKS
ಕೊಣಾಜೆ: ಕ್ರೀಯಾಶೀಲರಾಗಿ ಸಕಾರಾತ್ಮಕ ಚಿಂತನೆಯೊಂದಿಗೆ ಪ್ರಮಾಣಿಕ ಸೇವೆಯೊಂದಿಗೆ ಸಮಾಜದ ಋಣ ತೀರಿಸಿ ಎಂದು ನಿಟ್ಟೆವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ.ಶಾಂತರಾಮ ಶೆಟ್ಟಿ ತಿಳಿಸಿದ್ದಾರೆ. ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಇದರ 6ನೇ ವರ್ಷ ದ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ನ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಬೆಂಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ.ಎ.ಶ್ರೀಧರನ್ ಮುಖ್ಯ ಭಾಷಣ ಮಾಡಿದರು. ಎಂ.ಆರ್.ಪಿ.ಎಲ್. ಆಡಳಿತ ನಿರ್ದೆಶಕ ಎಂ.ವೆಂಕಟೇಶ್, ಟ್ರಸ್ಟಿ ಮಝರ್ ಬ್ಯಾರಿ, ಡೀನ್ ಮಹಾಬಲೇಶ್ವರಪ್ಪ, ,ಹಿರಿಯ ಸಲಹೆಗಾರ ಡಾ.ಎಸ್.ಕೆ.ರಾಯ್ಕರ್ ಮೊದಲಾದ ವರು ಉಪಸ್ಥಿತರಿದ್ದರು.
ಬಿಐಟಿ ಪ್ರಾಂಶುಪಾಲ ಡಾ.ಆಯಂಟೊನಿ ಎ.ಜಿ.ಸ್ವಾಗತಿಸಿದರು. ಮುಬೀನಾ ತಾಜ್ ಬಹುಮಾನಿತರ ಹೆಸರು ವಾಚಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ಮುಸ್ತಫಾ ಬಸ್ತಿಕೋಡಿ ವಂದಿಸಿದರು.
‘ಪದವಿ ಪಡೆದ ಬಳಿಕವೂ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಮುನ್ನಡೆಯಬೇಕು, ಕೆಲಸ ಯಾವುದೇ ಆದರೂ ಶಿಕ್ಷಕ ವೃತ್ತಿಗೆ ತಾಳೆ ಹಾಕಲಾಗದು. ಸರಿ ತಪ್ಪುಗಳ ಬಗ್ಗೆ ಅರಿತು ಮುಂದಿನ ಜೀವಬದಲ್ಲಿ ಮುನ್ನಡೆಯಿರಿ, ಹಿಂದೆ ಬಡತನವಿದ್ದರೂ ನೆಮ್ಮದಿ, ಪ್ರೀತಿ ಇತ್ತು. ಆದರೆ ಇಂದು ಹಣವಿದ್ದರೂ ನೆಮ್ಮದಿ, ಪ್ರೀತಿ ಮರೀಚಿಕೆಯಾಗಿದೆ’
ಸಯ್ಯದ್ ಮಹಮ್ಮದ್ ಬ್ಯಾರಿ, ಬಿಐಟಿ ಅಧ್ಯಕ್ಷ