UN NETWORKS
ಕೊಣಾಜೆ: ಉತ್ತಮ ಪರಿಸರ ಇದ್ದರೆ ಮಾತ್ರ ಆರೋಗ್ಯಕರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ವನಸಂರಕ್ಷಣೆ, ಪರಿಸರಪರ ಕಾಳಜಿಯು ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹಿರಿಯರಾದ ಕೃಷ್ಣ ಭಟ್ ಕುಂಟಾಳಗುಳಿ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಹಾಕಾಳಿ ಮಿತ್ರ ಮಂಡಳಿ ಅಧ್ಯಕ್ಷರಾದ ಸುದಾಕರ ಕಾನ, ಕಾರ್ಯದರ್ಶಿ ಮಧುಸೂದನ್, ಶ್ರೀಧರ್ ಭಟ್, ಸತ್ಯನಾರಾಯಣ ಭಟ್ ಕೊಣಾಜೆ, ಡಾ.ಎಸ್.ಎನ್.ಭಟ್, ವೆಂಕಪ್ಪ, ಪ್ರದೀಪ್ ಭಟ್ ಕೊಣಾಜೆ, ವಿಜಯ ಕಾನ, ಉದಯ ಕುಮಾರ್ ಶೆಟ್ಟಿ, ಲಿಂಗಪ್ಪ ನಾಯ್ಕ್, ಪದ್ಮನಾಭ, ಪ್ರವೀಣ್ ಭಟ್, ಶಶಿಧರ್, ರಿಜೇಶ್, ಹರೀಶ್ ನಡುಪದವು, ಮೋಹನ್ ಕಾಟುಕೋಡಿ, ಜಗದೀಶ್ ನಡುಪದವು, ಪ್ರಸನ್ನ ಮೊದಲಾದವರು ಉಪಸ್ಥಿತರಿದ್ದರು.