UN NETWORKS
ತೊಕ್ಕೊಟ್ಟು: ರಾಷ್ಟ್ರೀಯ ಹೆದ್ದಾರಿ66ರ ತೊಕ್ಕೊಟ್ಟು ಜಂಕ್ಷನ್ ಶುಕ್ರವಾರವೂ ಸಂಚಾರ ಅಸ್ತವ್ಯಸ್ತಗೊಂಡಿದ್ದು ಬೆಳಗ್ಗಿನಿಂದ ರಾತ್ರಿವರೆಗೆ ವಾಹನಗಳು ಸರತಿಯಲ್ಲಿ ಸಂಚರಿಸಿತು. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಲ್ಲಾಪುವಿನಿಂದ ತೊಕ್ಕೊಟ್ಟು ಓವರ್‍ಬ್ರಿಡ್ಜ್‍ವರೆಗೆ ಮಳೆ ನೀರು ರಸ್ತೆಯಲ್ಲೇ ಹರಿದು ಸಂಪೂರ್ಣ ಹೊಂಡಮಯವಾಗಿದ್ದು, ಶುಕ್ರವಾರ ಸುರಿದ ಮಳೆಗೆ ಜಂಕ್ಷನ್ ಇನ್ನಷ್ಟು ಹದಗೆಟ್ಟಿದೆ. ಸುಮಾರು ಒಂದು ಕಿ. ಮಿ. ರಸ್ತೆ ಹೊಂಡದಿಂದ ವಾಹನಗಳು ಸುಮಾರು ಅರ್ಧ ಗಂಟೆಗಳ ಕಾಲ ಈ ರಸ್ತೆಯಲ್ಲೇ ನಿಧಾನವಾಗಿ ಸಂಚರಿಸುವಂತಾಗಿದೆ.
ಹೊಂಡ ತುಂಬಿಸಿದ ಟ್ರಾಫಿಕ್ ಪೊಲೀಸರು : ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಹೊಂಡದಿಂದ ವಾಹನಚಾಲಕರು ಪರದಾಡುವುದನ್ನು ಕಂಡ ಸ್ಥಳೀಯವಾಗಿ ಡ್ಯೂಟಿಯಲ್ಲಿದ್ದ ಟ್ರಾಫಿಕ್ ಪೊಲೀಸರು ಹೊಂಡಗಳಿಗೆ ಕಲ್ಲು ತುಂಬಿಸಿ ಸುಗಮ ಸಂಚಾರ ನಡೆಸಲು ತಮ್ಮ ಕೈಲಾದ ಸಹಾಯ ಮಾಡಿದರು. ಆದರೆ ಒಂದು ಕಿ.ಮೀ. ಉದ್ದಕ್ಕೆ ರಸ್ತೆ ಹೊಂಡವಾಗಿದ್ದರಿಂದ ರಾತ್ರಿವರೆಗೂ ವಾಹನ ಸರತಿಯಲ್ಲಿ ಸಂಚರಿಸುವಂತಾಯಿತು.