Site icon Ullalavani

ಸೋಮೇಶ್ವರ ಉಚ್ಚಿಲ ನಿವಾಸಿ ಕೃಷ್ಣ ಕಾರಂತ್ ನಿಧನ

UN NETWORKS

ಸೋಮೇಶ್ವರ : ಸೋಮೇಶ್ವರ ಉಚ್ಚಿಲ ನಿವಾಸಿ ಕೃಷ್ಣ ಕಾರಂತ್(91) ಜೂ. 29ರಂದು ಶುಕ್ರವಾರ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮುಂಬೈಯಲ್ಲಿ ಶಿಕ್ಷಕರಾಗಿದ್ದ ಅವರು ಒಂದು ವರ್ಷ ದೇರಳಕಟ್ಟೆ ಶಾಲೆಯಲ್ಲಿ ಕಾರ್ಯ ನಿರ್ವಹಿಸಿ ಬಳಿಕ ಭಾರತೀಯ ಜೀವ ವಿಮಾ ನಿಗಮದಲ್ಲಿ ಸುಮಾರು 40 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಪ್ರಬಂಧಕರಾಗಿ ನಿವೃತ್ತಿಹೊಂಡಿದ್ದರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಮುಂಬೈ ಫುಟ್‍ಬಾಲ್ ಅಸೋಸಿಯೇಶನ್‍ನಲ್ಲಿ ಸಕ್ರಿಯರಾಗಿದ್ದರು. ಕೋಟೆಕಾರು ಗಣೇಶೋತ್ಸವ ಸಮಿತಿಯಲ್ಲಿ 10 ವರ್ಷಗಳ ಕಾಲ ಅಧ್ಯಕ್ಷರಾಗಿ, ಕೋಟೆಕಾರು ಶಾಲಾ ಹಲೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು.

Exit mobile version