UN NETWORKS
ಉಳ್ಳಾಲ: ಪರಿಸರ ಸ್ನೇಹಿಯಾಗುವ ಉದ್ದೇಶದಿಂದ ಯೆನೆಪೋಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನಲ್ಲಿ ಶೇ.20 ರಷ್ಟು ವಿದ್ಯುತ್ ಉಳಿಸುವ ಸಲುವಾಗಿ 498 ಕಿಲೋ ವಾಟ್ಸ್ ವಿದ್ಯುತ್ ಉತ್ಪಾದಿಸುವ ಸೌರ ಫಲಕವನ್ನು ಅಳವಡಿಸಲಾಗಿದೆ ಎಂದು ದೇರಳಕಟ್ಟೆ ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ|.ಎಂ ವಿಜಯಕುಮಾರ್ ಹೇಳಿದರು.
ಸೌರ ಫಲಕದ ಅಳವಡಿಕೆಯಿಂದಾಗಿ ಕ್ಯಾಂಪಸ್ಸಿನಲ್ಲಿ ಶೇ. 20 ರಷ್ಟು ವಿದ್ಯುತ್ ಉಳಿಸಲು ಸಾಧ್ಯವಾಗಿದೆ. ಪರಿಸರ ಸ್ನೇಹಿಯಾಗಿ ಬೆಳೆಯುತ್ತಿರುವ ವಿಶ್ವವಿದ್ಯಾಲಯಕ್ಕೆ ಇದೊಂದು ಹಿರಿಮೆ ತಂದಿದೆ. ಸದ್ಯ ಅಳವಡಿಸಿರುವ ಸೌರ ಫಲಕದಿಂದ 498 ಕಿಲೋ ವಾಟ್ಸ್ ವಿದ್ಯುತ್ ಉತ್ಪಾದನೆಯಾಗಲಿದೆ. ಬರುವ ದಿನಗಳಲ್ಲಿ ಶೇ. 100 ರಷ್ಟು ವಿದ್ಯುತ್ ಸೌರಶಕ್ತಿಯಿಂದಲೇ ದೊರೆಯುವಂತಹ ಪ್ರಯತ್ನವನ್ನು ಮುಂದುವರಿಸಲಾಗುವುದು ಎಂದರು.
ಯೆನೆಪೋಯ ವಿ.ವಿ ಹಣಕಾಸು ವಿಭಾಗದ ನಿರ್ದೇಶಕ ಫರ್ಹಾದ್ ಯೆನೆಪೋಯ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಶ್ರೀಕುಮಾರ್ ಮೆನನ್, ಹಣಕಾಸು ಅಧಿಕಾರಿ ಮಹಮ್ಮದ್ ಬಾವಾ.ಪಿ, ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ|.ಬಿ.ಹೆಚ್.ಶ್ರೀಪತಿ ರಾವ್, ವೈದ್ಯಕೀಯ ಕಾಲೇಜಿನ ಡೀನ್ ಡಾ| ಮೂಸಬ್ಬ, ಅಲೈಡ್ ಹೆಲ್ತ್ ಆಂಡ್ ಬೇಸಿಕ್ ಸೈನ್ಸಸ್ ವಿಭಾಗದ ಡೀನ್ ಪ್ರೊ.ಪದ್ಮ ಕುಮಾರ್, ನರ್ಸಿಂಗ್ ಕಾಲೇಜಿನ ಡೀನ್ ಡಾ| ಲೀನಾ ಕೆ.ಸಿ, ಇಸ್ಲಾಮಿಕ್ ಅಧ್ಯಯನಗಳ ನಿರ್ದೇಶಕ ಡಾ| ಜಾವೇದ್ ಜಾಮಿಲ್, ಯೆನೆಪೋಯ ಸಂಶೋಧನಾ ವಿಭಾಗದ ನಿರ್ದೇಶಕ ಡಾ| ಅರುಣ್ ಭಾಗವತ್, ಕಣ್ಣೂರು ಮತ್ತು ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.