Site icon Ullalavani

ಉಳ್ಳಾಲ ಕೇಂದ್ರ ಜುಮಾ ಮಸೀದಿ “ಆದರ್ಶ” ಮಸೀದಿಯಾಗಿ ಆಯ್ಕೆ

UN NETWORKS

ಉಳ್ಳಾಲ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ, ಜಿಲ್ಲೆಯ ಆಯ್ದ ಧಾರ್ಮಿಕ ಸಂಸ್ಥೆಯಡಿ ಸರ್ಕಾರದ ವಿವಿಧ ಯೋಜನೆ ಬಗ್ಗೆ ಮತ್ತು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ದಿಗೊಳ್ಳುವಂತಹ ಕಾರ್ಯಗಳ ಬಗ್ಗೆ ಜನರಿಗೆ ತಲುಪಲು ಸಹಾಯಕವಾಗುವಂತೆ ಮಾಹಿತಿ ಕೇಂದ್ರ ಸ್ಥಾಪಿಸುವ ಯೋಜನೆಯಡಿ ದ.ಕ ಜಿಲ್ಲೆಯ 5ಧಾರ್ಮಿಕ ಸಂಸ್ಥೆಯ ಪೈಕಿ ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗ ಕಮಿಟಿಯು ಆದರ್ಶ (ಮಿಸಾಲಿ) ಮಸೀದಿಯಾಗಿ ಆಯ್ಕೆಗೊಂಡಿರುತ್ತದೆ.

ಮಿಸಾಲಿ ಮಸೀದಿ ಕಾರ್ಯನಿರ್ವಹಣೆಗೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿಗೆ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ಅಧ್ಯಕ್ಷರಾದ ಅಲ್‍ಹಾಜಿ ಕನಚೂರು ಮೋನುರವರು 80ಸಾವಿರ ರುಪಾಯಿಯ ಚೆಕ್ಕ್ ನ್ನು ವಕ್ಫ್ ಕಛೇರಿಯಲ್ಲಿ ವಿತರಿಸಿದರು. ಈ ಸಂದರ್ಭ ದರ್ಗಾ ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಜತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ ಉಪಸ್ಥಿತರಿದ್ದರು.

ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಆಡಳಿತ ಕಮಿಟಿ ಆದರ್ಶ ಮಸೀದಿಯಾಗಿ ಆಯ್ಕೆಗೊಂಡ ಬಗ್ಗೆ ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಹರ್ಷ ವ್ಯಕ್ತಪಡಿಸಿದರು, ಇಬ್ರಾಹೀಮ್ ಹಾಜಿಯವರ ಮರಣವು ಉಳ್ಳಾಲಕ್ಕೆ ತುಂಬಲಾರದ ನಷ್ಟವಾದಾಗ, ಅದ್ಯಕ್ಷತೆಗೆ ಸೂಕ್ತ ಸ್ಥಾನ ತುಂಬಿದ ಅಲ್ ಹಾಜಿ ಕನಚೂರು ಮೋನುರವರು, ಮಧ್ಯಾಹ್ನ ಗಂಜಿ, ಮಸೀದಿ ನವೀಕರಣ, ಮಸೀದಿ ನಿರ್ಮಾಣ, ಶಾಲೆ ನಿರ್ಮಾಣ, ಕಂಪ್ಯೂಟರೀಕರಣ ಸೇರಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಆಸರೆಯಾಗಿದ್ದರು, ಇದೀಗ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ಸಮುದಾಯದ ಬಗ್ಗೆ ಕಾಳಜಿಯಿಂದ ರಾಜ್ಯ ವಕ್ಫ್ ಮಂಡಳಿಯ ಯೋಜನೆಗಳನ್ನು ತ್ವರಿತ ರೀತಿಯಲ್ಲಿ ಕಾರ್ಯರೂಪಕ್ಕೆ ತಂದು ಇಂದು ದ.ಕ ಜಿಲ್ಲೆಯಲ್ಲಿ 5 ಮಿಸಾಲಿ ಮಸೀದಿಗಳನ್ನು ಆಯ್ಕೆ ಮಾಡಿ ಚೆಕ್ ವಿತರಿಸುವ ಮೂಲಕ ಯೋಜನೆಯ ಹೆಜ್ಜೆಯನ್ನಿಟ್ಟು ಮುನ್ನಡೆಯುತ್ತಿದ್ದಾರೆ, ಉಳ್ಳಾಲ ಸಾವಿರ ಜಮಾಅತ್, ಕೇಂದ್ರ ಜುಮಾ ಮಸಿದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ, ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್, ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Exit mobile version