Site icon Ullalavani

ದೇರಳಕಟ್ಟೆಯಲ್ಲಿ ಮಹಿಳಾ ಶರೀಅತ್ ಕಾಲೇಜು ಉದ್ಘಾಟನೆ

UN NETWORKS

ಉಳ್ಳಾಲ: ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಮಹಿಳೆಯರಿಗಾಗಿ ಒಂದು ವರ್ಷದ ವಿಶೇಷ ಕೋರ್ಸ್ ಮಹಿಳಾ ಶರೀಅತ್ ಕಾಲೇಜ್” ಗೆ ಜೂನ್ 28 ಗುರುವಾರ ಚಾಲನೆ ನೀಡಲಾಯಿತು.ಟ್ರಸ್ಟ್ ಅಧ್ಯಕ್ಷರಾದ ಏಷ್ಯನ್ ಅಹ್ಮದ್ ಬಾವಾ ಹಾಜಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯಿದ್ ಇಸ್ಮಾಈಲ್ ಅಲ್ ಅಹ್ ದಲ್ ತಂಙಳ್ ಆದೂರು, ಕೇರಳ ರವರು ಉಧ್ಘಾಟಿಸಿದರು.

ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ವಿ.ಯು ಇಸ್ಹಾಖ್ ಝುಹ್ರಿ ಸೂರಿಂಜೆ ವಿಷಯ ಮಂಡಿಸಿದರು.ಕಾಲೇಜ್ ನ ಪ್ರೊಫೆಸರುಗಳಾದ ಅಬೂಬಕರ್ ಸಿದ್ದೀಖ್ ಅಹ್ಸನಿ ಹಾಗೂ ಆಯಿಶಾ ಫರ್ವೀನ ಕಾಲೇಜ್ ನ ನೀತಿ, ನಿಯಮಗಳನ್ನು ವಿವರಿಸಿದರು.ತಾಜುಲ್ ಉಲಮಾ ಮಸ್ಜಿದ್ ನ ಇಮಾಮ್ ಅಶ್ರಫ್ ಸ ಅದಿ, ಟ‍್ರಸ್ಟ್ ಕೋಶಾಧಿಕಾರಿ ಹಾಜಿ ಬಶೀರ್ ಅಹ್ಮದ್ ದೇರಳಕಟ್ಟೆ,ಸದಸ್ಯರಾದ ಯೂಸುಫ್ ರಝ್ವಿ, ಹಾಜಿ ಅಹ್ಮದ್ ಕಬೀರ್ ಆ, ಹಮೀದ್ ಹಾಜಿ ದೇರಳಕಟ್ಟೆ ಭಾಗವಹಿಸಿದ್ದರು.

Exit mobile version