Site icon Ullalavani

ಸಾಚಾರ್ ಸಮಿತಿ ಶಿಪಾರಸ್ಸನ್ನು ಸಾಮಾನ್ಯ ಕನಿಷ್ಟ ಕಾರ್ಯಕ್ರಮದಲ್ಲಿ ಸೇರ್ಪಡಿಸಲು ಆಗ್ರಹ : ನಝೀರ್ ಉಳ್ಳಾಲ್

UN NETWORKS

ಉಳ್ಳಾಲ: ಚುನಾವಣಾ ಪೂರ್ವ ಪ್ರಣಾಲಿಕೆ,ಭರವಸೆಗಳಲ್ಲಿ ಜೆ.ಡಿ ಎಸ್ ಮತ್ತು ಕಾಂಗ್ರೆಸ್ ಪಕ್ಷಗಳು,ನೀಡಿದ ವಾಗ್ಧಾನದಂತೆ ವಿಧ್ಯೆ ಮತ್ತು ಉಧ್ಯೋಗದಲ್ಲಿ ನಿಕೃಷ್ಟ ಸ್ಥಿತಿಯಲ್ಲಿರುವ ಮುಸ್ಲಿಂ ಜನಾಂಗದ ಸಬಲೀಕರಣಕ್ಕಾಗಿ ನ್ಯಾಯಮೂರ್ತಿ ರಾಜೇಂದ್ರ ಕುಮಾರ ಸಾಚಾರ್ ಸಮಿತಿ ಸೂಚಿಸಿದ ಶಿಪಾರಸುಗಳನ್ನು ಜಾರಿಗೊಳಿಸುವ ,ಮತ್ತು ಪ್ರತಿ ಜಿಲ್ಲೆಯಲ್ಲೂ ಮುಸ್ಲಿಂ ಮಕ್ಕಳಿಗೆ ಉಚಿತ ವಸತಿ ಶಾಲೆಯನ್ನು ಸ್ಥಾಪಿಸುವ ಯೋಜನೆಯನ್ನು ಸಾಮಾನ್ಯ ಕನಿಷ್ಟ ಕಾರ್ಯಕ್ರಮ ದಲ್ಲಿ ಸೇರಿಸಿಕೊಳ್ಳಬೇಕು ಎಂದು ಜೆ.ಡಿ.ಎಸ್ ಮುಖಂಡ ನಝೀರ್ ಉಳ್ಳಾಲ್ ರವರು ಮುಖ್ಯಮಂತ್ರಿ ಕುಮಾರ ಸ್ವಾಮಿ,ಜೆ.ಡಿ.ಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ ದೇವೇಗೌಡ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿಧ್ಧರಾಮಯ್ಯ ರವನ್ನು ಒತ್ತಾಯಿಸಿದ್ದಾರೆ.

ಹೆಚ್.ಡಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ವಿಧ್ಯೆ ಮತ್ತು ಉಧ್ಯೋಗದಲ್ಲಿ ಮುಸಲ್ಮಾನರಿಗೆ 4%ಮೀಸಲಾತಿ ಮತ್ತು 4 ಮುಸ್ಲಿಂ ವಸತಿ ಶಾಲೆಯನ್ನ ಸ್ಥಾಪಿಸಿದ್ದರು. ಅದನ್ನೇ ಮಾದರಿಯಾಗಸಿ ಕಾರ್ಯಕ್ರಮ ಜಾರಿಗೊಳಿಸಬೇಕೆಂದು ನಝೀರ್ ಉಳ್ಳಾಲ್ ಆಗ್ರಹಿಸಿದ್ದಾರೆ.

Exit mobile version