Site icon Ullalavani

ಯೋಗ ಆರೋಗ್ಯ ವೃದ್ಧಿಗೆ ಪೂರಕ : ಡಾ| ಕೆ. ಕೃಷ್ಣ ಶರ್ಮ

UN NETWORKS

ಕೊಣಾಜೆ: ಯೋಗದ ಮೂಲಕ ಮಾನಸಿಕ ಕೇಂದ್ರಿಕರಣದದ ಜೊತೆಗೆ ಶಾರೀರಿಕವಾಗಿಯೂ ಬಲವರ್ಧನೆ ಮಾಡಬಹುದು ಹಾಗೂ ವಿವಿಧ ಆಸನಗಳು ಆರೋಗ್ಯ ವೃದ್ಧಿಗೆ ಕಾರಣವಾಗುತ್ತವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ, ವಿಭಾಗದ ಮುಖ್ಯಸ್ಥರಾದ ಡಾ| ಕೆ. ಕೃಷ್ಣ ಶರ್ಮ ಅಭಿಪ್ರಾಯಪಟ್ಟರು.

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶ್ವಮಂಗಳ ಸಭಾಭವನದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಾಗಿ ಭಾಗವಹಿಸಿ ಮಾತನಾಡಿದರು. ಆಡಳಿತ ಮಂಡಳಿಯ ಮುಖ್ಯಸ್ಥ ಪ್ರೊ| ಬಿ.ಇಸ್ಮಾಯಿಲ್ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆಯ ಮೂಲಕ ನಾವು ಗುರಿಯನ್ನು ತಲುಪಬಹುದು. ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಸ್ವಲ್ಪ ಅವಧಿಯನ್ನು ಯೋಗಕ್ಕಾಗಿ ಮೀಸಲಿಡಬೇಕು ಎಂದರು.

ಈ ಸಂದರ್ಭದಲ್ಲಿ ಯೋಗ ವಿಜ್ಞಾನದ ಸಂಶೋಧನಾ ವಿದ್ಯಾರ್ಥಿಗಳಾದ ಅಮಿಯಾದಾಸ್ ಹಾಗೂ ಆದಿತ್ಯ ಕೃಷ್ಣ ಅವರು ಸರಳವಾದ ಕೆಲವೊಂದು ಆಸನಗಳನ್ನು ತಿಳಿಸಿಕೊಟ್ಟರು.ವಿದ್ಯಾರ್ಥಿನಿ ಗಾನ ಗೌಶಿಕ್ ಯೋಗ ದಿನದ ಬಗ್ಗೆ ಮಾತನಾಡಿದರು.ಪ್ರೌಢ ಶಾಲಾ ಮುಖ್ಯಸ್ಥೆ ಪ್ರಿಯ ಎನ್, ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಡಾ| ಶಿವಣ್ಣ ಶಿಕ್ಷಕ ಹಾಗೂ ಶಿಕ್ಷಕೇತರರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಶೋಭಾವತಿ ಸ್ವಾಗತಿಸಿದರು. ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದಿಲೀಪ್ ರೈ ಅವರು ವಂದಿಸದರು.

 

Exit mobile version