Site icon Ullalavani

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಹಿರಿದು-ಗೀತಾ ಶ್ಯಾನುಭೋಗ್

UN NETWORKS

ಹರೇಕಳ : ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ, ಹರೇಕಳ ಸಭಾಂಗಣದಲ್ಲಿ ಪೋಷಕರ ಸಭೆಯು ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತಾಲೂಕು ಸಮನ್ವಯ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ವಲಯ ಸಂಪನ್ಮೂಲ ಅಧಿಕಾರಿಗಳಾದ ಗೀತಾ ಶ್ಯಾನುಭೋಗ್‍ರವರು ಮಾತನಾಡುತ್ತಾ ಇಂದು ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಶಿಕ್ಷಕರ ಪಾತ್ರದಷ್ಟೇ ಪೋಷಕರ ಪಾತ್ರ ಕೂಡ ಪ್ರಾಮುಖ್ಯವಾಗಿರುತ್ತದೆ ಎಂದರು.

ಅನುದಾನಿತ ವಿದ್ಯಾಸಂಸ್ಥೆ ಎಂಬುದು ಒಂದು ರಥದ 4 ಚಕ್ರವಿದ್ದಂತೆ.ಇದು ಕ್ರಮವಾಗಿ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘ, ಅಧ್ಯಾಪಕ ವೃಂದ ಮತ್ತು ಪೋಷಕರು ಇವು ನಾಲ್ಕು ಕೂಡ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ಅಭಿವೃದ್ಧಿಯ ಪಥದಲ್ಲಿ ನಡೆಯುತ್ತದೆ ಮತ್ತು ವಿದ್ಯಾರ್ಥಿಗಳ ಭವಿಷ್ಯವು ರೂಪುಗೊಳ್ಳುತ್ತದೆ. ಈ ನೆಲೆಯಲ್ಲಿ ಪೋಷಕರು ಕಾರ್ಯಪ್ರವೃತ್ತರಾಗಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಜಯರಾಮ ಆಳ್ವ ಪೋಡಾರು ವಹಿಸಿದರು. ಮುಖ್ಯ ಅತಿಥಿಗಳಾಗಿ ಸಿ.ಆರ್.ಪಿ.ಯವರಾದ ಸುಗುಣರವರು ಉಪಸ್ಥಿತರಿದ್ದರು. ಶಾಲಾಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಯವರು ಪ್ರಾಸ್ತಾವಿಕವಾಗಿ ವಿದ್ಯಾ ಸಂಸ್ಥೆಯ ನಡವಳಿಗಳು ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು.

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶೈಕ್ಷಣಿಕ ಸಾಲಿನಲ್ಲಿ ಈ ಸಂಘಕ್ಕೆ ಅಧ್ಯಕ್ಷರನ್ನಾಗಿ ಐಡಾರವರು ಆಯ್ಕೆ ಆದರು. ಉಪಾಧ್ಯಕ್ಷರಾಗಿ ಅಬೂಬಕ್ಕರ್‍ರವರು, ಜತೆ ಕಾರ್ಯದರ್ಶಿಯಾಗಿ ಪ್ರಸಿಲ್ಲ, ಕೋಶಾಧಿಕಾರಿಯಾಗಿ ಅಶ್ರಫ್, ಸಂಘಟನಾ ಕಾರ್ಯದರ್ಶಿಯಾಗಿ ಝೀಟ ಐರಿನ್‍ರವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಹೂಗುಚ್ಛ ನೀಡಿ ಗೌರವಿಸಲಾಯಿತು. ಶಿಕ್ಷಕ ರವಿಶಂಕರ್ ಸ್ವಾಗತಿಸಿದರು.ಶಿಕ್ಷಕಿ ಮೋಹಿನಿ ಧನ್ಯವಾದ ನೀಡಿದರು ಮತ್ತು ದೈಹಿಕ ಶಿಕ್ಷಕರಾದ ತ್ಯಾಗಂರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಕುಮುದ, ಶಿವಕುಮಾರ್, ಕೃಷ್ಣಶಾಸ್ತ್ರಿ, ಉಷಲತಾ, ನೂತನ, ಸ್ಮಿತಾ ಕುಮಾರಿ ಉಪಸ್ಥಿತರಿದ್ದರು.

Exit mobile version