UN NETWORKS
ಮುಡಿಪು: ಕುರ್ನಾಡು ಗ್ರಾ. ಪಂ. ವ್ಯಾಪ್ತಿಯ ಮಿತ್ತ ಕೋಡಿ ಅಮೃತ ಕಲ್ಪ ಎಂಬಲ್ಲಿ ಮುಡಿಪು- ಮೆಲ್ಕಾರ್ ಮುಖ್ಯರಸ್ತೆ ಮೇಲೆ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತವಾಯಿತು. ಸೋಮವಾರ ಸಂಜೆಯಿಂದ ಧಾರಾಕಾರ ಮಳೆ ಸುರಿದಿತ್ತು. ಮಂಗಳವಾರ ಬೆಳಗ್ಗಿನ ಜಾವ ಕುರ್ನಾಡು ಬಳಿ ಗುಡ್ಡ ಕುಸಿದಿದ್ದು, ಮುಡಿಪುವಿನಿಂದ ಬಿ.ಸಿ. ರೋಡ್ ಕಡೆ ಸಂಚರಿಸುವ ವಾಹನಗಳಿಗೆ ತಡೆಯಾಯಿತು. ಈ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳು ಬೋಳಿಯಾರ್ ಕುರ್ನಾಡು ಮಾರ್ಗವಾಗಿ ಮುಡಿಪು ಮತ್ತು ಬಿ.ಸಿ.ರೋಡ್ ಕಡೆ ಸಂಚಾರ ನಡೆಸಿದವು.