Site icon Ullalavani

ಬಿಜೈನಲ್ಲಿ ಆರ್ಯ ಆಯುರ್ವೇದ ಪಂಚಕರ್ಮ ಹಾಗೂ ಫಿಟ್‍ನೆಸ್ ಕೇಂದ್ರ ಉದ್ಘಾಟನೆ

UN NETWORKS

ಮಂಗಳೂರು: ಆರ್ಯ ಎಜ್ಯುಕೇಷನಲ್ ಟ್ರಸ್ಟ್ ನ ಆರ್ಯ ಆಯುರ್ವೇದ ಪಂಚಕರ್ಮ ಹಾಗೂ ಫಿಟ್‍ನೆಸ್ ಕೇಂದ್ರ ಮಂಗಳೂರಿನ ಬಿಜೈ ನ್ಯೂ ರೋಡಿನ ಎರಡನೇ ಕ್ರಾಸಿನಲ್ಲಿ ಸೋಮವಾರ ಶುಭಾರಂಭಗೊಂಡಿತು.

ಪಾರಂಪರ್ಯ ಆಯುರ್ವೇದ ಆಧಾರಿತ ಆರೋಗ್ಯ ಮತ್ತು ಚಿಕಿತ್ಸಾ ಕೇಂದ್ರದಲ್ಲಿ ಯೋಗ ಮತ್ತು ಜ್ಞಾನ ತರಬೇತಿ ಇಂದಿನಿಂದಲೇ ಆರಂಭಗೊಂಡಿದೆ. ಬೆಳಿಗ್ಗೆ 5.30 ರಿಂದ ಸಂಜೆ 7.30 ರವರೆಗೆ ಕೇಂದ್ರದಲ್ಲಿ ತರಬೇತಿ ನಡೆಯಲಿದೆ.ಬಳಿಕ ಝುಂಬಾ ಬೆಳಿಗ್ಗೆ 8.30 ರಿಂದ 11.30ರವರೆಗೆ ಬೆಳಗ್ಗಿನ ಬ್ಯಾಚ್ ಮತ್ತು ಸಂಜೆ ಬ್ಯಾಚ್ 5.30 ರಿಂದ 7.30ರವರೆಗೆ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಡಾ| ಸಂಜೀವ ದಂಡಕೇರಿ, ಕೃಷ್ಣಪ್ಪ ಬಂಗೇರ, ವೆಂಕಟೇಶಯ್ಯ.ವಿ.ಬೆಂಗಳೂರು, ರವಿಶಂಕರ್ ಮಿಜಾರ್, ಕೆ.ಎಲ್ . ಪೂಜಾರಿ ಭಾಗವಹಿಸಿದ್ದರು. ಟ್ರಸ್ಟಿಗಳಾದ ಶೈಲೇಂದ್ರ ಬಿ.ವಿ, ಧಾರೇಶ್ ಅಂಚನ್. ಯಸ್, ಭಾರತಿ ಧಾರೇಶ್, ಲಿಖಿತಾ.ಯನ್ ಉಪಸ್ಥಿತರಿದ್ದರು.

ಯೋಗ ಮತ್ತು ಧ್ಯಾನದ ತರಬೇತಿಯನ್ನು ಯೋಗಿಕ್ ಸೈನ್ಸ್ ಎಂ.ಎಸ್ಸಿ ಪದವೀಧರೆ ಉಮಾದೇವಿ ನೀಡಲಿದ್ದು, ಅಂತರಾಷ್ಟ್ರೀಯ ಮಟ್ಟದ ಝುಂಬಾ ತರಬೇತುದಾರೆ ನಮ್ರತಾ ನೀಡಲಿದ್ದಾರೆ.

ಟ್ರಸ್ಟೀ ಭಾರತಿ ಧಾರೇಶ್ ಮಾತನಾಡಿ ಪಂಚಕರ್ಮ ಚಿಕಿತ್ಸೆ ಯೋಗ ಧ್ಯಾನ ತರಬೇತಿ ಆರಂಭಿಸಲಾಗಿದೆ. ಇಂದಿನ ಜನರ ಮನಸ್ಥಿತಿ, ಸಮಸ್ಯೆಗಳಿಗೆ ಅನುಕೂಲವಾಗುವಂತೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆರೋಗ್ಯದ ಮೊದಲ ಐಶ್ವರ್ಯ ನಂತರ ಅನ್ನುವುದನ್ನು ಮನದಲ್ಲಿಟ್ಟುಕೊಂಡು ಕೇಂದ್ರವನ್ನು ಸ್ಥಾಪಿಸಲಾಗಿದೆ. ಗೊಂದಲಮಯ ಜೀವನಸ್ಥಿತಿಗಾಗಿ ಯೋಗವನ್ನು ಆರಂಭಿಸಿ ಶಿಸ್ತುಬದ್ಧ ಜೀವನ ನಡೆಸಲು ದಾರಿ ಮಾಡುತ್ತಿದ್ದೇವೆ. ದೇಹವನ್ನು ಹೆಚ್ಚು ಪುನಶ್ಚೇತನಗೊಳಿಸುವುದು ಪಂಚಕರ್ಮ ಚಿಕಿತ್ಸೆಯಿಂದ ಸಾಧ್ಯ. ಅಲ್ಲದೆ ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನದಂದೇ ಯೋಗ ತರಬೇತಿಯನ್ನು ಆರಂಭಿಸಲಾಗುತ್ತಿದೆ.

Exit mobile version