UN NETWORKS
ಉಳ್ಳಾಲ: 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ರಚನೆಯನ್ನು ಅನುದಾನಿತ ಹೋಲಿ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 18.06.2018ರಂದು ನಡೆಸಲಾಯಿತು. ಇಲ್ಲಿ ಮತದಾನದ ಅನುಭವದ ವಾತವರಣ ಕಂಡು ಬಂತು. ಮತದಾನರ ಸಾಲು, ಮತದಾನದ ಪೆಟ್ಟಿಗೆ, ಮತದಾನದ ಬ್ಯಾಲೆಟ್ ಪೇಪರ್ ಮತ್ತು ಮತದಾನರು. ಇದರ ಪೂರ್ವ ತಯಾರಿಯಾಗಿ 4.06.2018ರಂದು 9 ಅಭ್ಯರ್ಥಿಗಳು ಶಾಲಾ ಮುಖ್ಯೋಪಾಧ್ಯಾಯನಿಯವರಿಗೆ ನಾಮ ಪತ್ರವನ್ನು ಸಲ್ಲಿಸಿದರು.
9 ಆಭ್ಯರ್ಥಿಗಳು: ಸೌರವ್ (ಚಿಹ್ನೆ-ಘಂಟೆ), ರೀಶಲ್ ಶೈನಾ ಮೊಂತೆರೊ (ಶಾಲಾ ಚೀಲ), ಆಶಿಕಾ ಅಮಿರಾ (ಬಾಲ್ದಿ), ಡೆನ್ಸನ್ ಕ್ರಾಸ್ತ (ಗಡಿಯಾರ), ಆಯಿಶಾ ಸುಹಾನಾ (ಪೆನ್ಸಿಲ್), ವಿಘ್ನೇಶ್ ರಾವ್ (ಕುರ್ಚಿ-ಡೆಸ್ಕ್), ಸಲ್ವಿಟಾ ಮೊಂತೆರೊ (ಛತ್ರಿ), ಸ್ವೀಡಲ್ ಡಿ’ಸೋಜ (ಪುಸ್ತಕ), ಆಕಾಶ್ (ಸೈಕಲ್).
ಮತದಾನದ ಏಣಿಕೆ ಆಭ್ಯರ್ಥಿಗಳ ಸಮ್ಮುಖದಲ್ಲಿ ನಡೆಯಿತು. ಅತೀ ಹೆಚ್ಚು 120 ಮತದಾನದ ಜೊತೆ ರೀಶಲ್ ಶೈನಾ ಮೊಂತೆರೊ ಶಾಲಾ ನಾಯಕಿಯಾಗಿ ಆಯ್ಕೆಯಾದರು. ಶಾಲಾ ಮುಖ್ಯಸ್ಥೆ ಸಿಸ್ಟರ್ ಸೆವ್ರಿನ್ ಫೆರ್ನಾಂಡಿಸ್ ಅಭಿನಂದಿಸಿದರು. ಈ ಮತದಾನದ ಪ್ರಕ್ರಿಯೆಯನ್ನು ಶಾಲಾ ಶಿಕ್ಷಕರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.