Site icon Ullalavani

ಕೊಣಾಜೆ :ಕಬ್ಬಡಿ ಪಂದ್ಯಾಟದಲ್ಲಿ ಗುಡ್ಡುಪಾಲು ತಂಡ ಪ್ರಥಮ

UN NETWORKS

ಕೊಣಾಜೆ: ಕೊಣಾಜೆ ಗುಡ್ಡುಪಾಲು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ಇದರ ಆಶ್ರಯದಲ್ಲಿ ಅಣ್ಣೆರೆಪಾಲು ಬಳಿ ನಡೆದ ಮಕ್ಕಳ ಕಬ್ಬಡಿ ಪಂದ್ಯಾಟದಲ್ಲಿ ಶ್ರೀ ರಾಮಾಂಜನೇಯ ಗುಡ್ಡುಪಾಲು ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಕುತ್ತಾರು ಫ್ರೆಂಡ್ಸ್ ತಂಡ ಪಡೆದುಕೊಂಡಿತು.

ಪಂದ್ಯಾಟದಲ್ಲಿ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ತಂಡದ ಚರಣ್ ಕುಮಾರ್ ದೇವಂದಬೆಟ್ಟು ಸವ್ಯಸಾಚಿ ಪ್ರಶಸ್ತಿ ಪಡೆದುಕೊಂಡರೆ. ಕುತ್ತಾರು ತಂಡದ ತಾರನಾಥ್ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡರು, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಶ್ರೀ ರಾಮಾಂಜನೇಯ ತಂಡದ ಪ್ರಸಾದ್ ಕಂಡಿಲ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಕುಡುಬಿ ಗೌಡ ಸಮಾಜದ ಹಿರಿಯರಾದ ಮಂಜುನಾಥ ಅಣ್ಣೆರೆಪಾಲು ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿದರು. ಕೊಣಾಜೆ ಗ್ರಾ. ಪಂ.ಮಾಜಿ ಸದಸ್ಯ ಹಾಗೂ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಸ್ಥಾಪಕ ನರ್ಸುಗೌಡ ಅಣ್ಣೆರೆಪಾಲು, ಚಂದ್ರಹಾಸ್ ಕುತ್ತಾರ್, ಚಿತ್ತರಂಜನ್ ಕಂಡಿಲ, ದಿವಾಕರ್ ಕಂಡಿಲ, ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ನಾಗೇಶ್ ಗುಡ್ಡುಪಾಲು, ಕಬಡ್ಡಿ ಪಂದ್ಯಾಟದ ಸಂಘಟಕ ಗೋಪಾಲ ಗೌಡ ಅಣ್ಣೆರೆಪಾಲು, ವಸಂತ ಅಣ್ಣೆರೆಪಾಲು, ದಯಾನಂದ ಅಣ್ಣೆರೆಪಾಲು, ತಿಮ್ಮಪ್ಪ ಕುತ್ತಾರ್, ಬೂಬ ಅಣ್ಣೆರೆಪಾಲು ಮತ್ತಿತರರು ಉಪಸ್ಥಿತರಿದ್ದರು.

Exit mobile version