Site icon Ullalavani

ಕುತ್ತಾರು ಬಾಲ ಸಂರಕ್ಷಣಾ ಕೇಂದ್ರದಲ್ಲಿ ಸರಸ್ವತಿ ಪೂಜೆ

UN NETWORKS

ಉಳ್ಳಾಲ: ಶಿಸ್ತುಬದ್ಧ ಜೀವನ ರೂಪಿಸುವಿದರೊಂದಿಗೆ ಉತ್ತಮ ಭವಿಷ್ಯವನ್ನು ಕಂಡು ಕೊಳ್ಳುವಲ್ಲಿ ಬಾಲ ಸಂರಕ್ಷಣಾ ಕೇಂದ್ರದ ಮಕ್ಕಳು ಮುಂದಿನ ಶೈಕ್ಷಣಿಕ ಜೀವನದಲ್ಲಿ ಕಠಿಣ ಪರಿಶ್ರಮದೊಂದಿಗೆ ಬಾಲ್ಯದಲ್ಲಿಯೇ ಪ್ರಗತಿಯ ಹಾದಿಯನ್ನು ಕಂಡುಕೊಳ್ಳಲು ಇದು ಸೂಕ್ತ ಸಮಯ ಎಂದು ಲೆಕ್ಕ ಪರಿಶೋದಕ ಎಸ್‍ಎ.ಸ್. ನಾಯಕ್ ಮಂಗಳೂರು ಅಭಿಪ್ರಾಯಪಟ್ಟರು.

ಕುತ್ತಾರಿನ ಮಂಗಳ ಸೇವಾ ಸಮಿತಿ ಟ್ರಸ್ಟ್ ನ ಆಶ್ರಯದ ಕುತ್ತಾರಿನ ಬಾಲಸಂರಕ್ಷಣಾ ಕೇಂದ್ರದಲ್ಲಿ ಶೈಕ್ಷಣಿಕ ವರ್ಷದ ಶುಭಾರಂಭದ ಪ್ರಯುಕ್ತ ಸರಸ್ವತಿ ಪೂಜೆ ಹಾಗೂ ಗಣಹೋಮದ ಬಳಿಕ ನಡೆದ ಧಾರ್ಮಿಕ ಸಭಾ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಂಗಳಾ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಯೋಧ ಮೋಹನ್‍ದಾಸ್ ಅವರನ್ನು ಸನ್ಮಾನಿಸಲಾಯಿತು.

ಮಂಗಳಾ ಸೇವಾ ಸಮಿತಿ ಟ್ರಸ್ಟ್ ಸಂಚಾಲಕ ಅನಂತ ಕೃಷ್ಣ ಭಟ್‍ ಸಂಸ್ಥೆಯ ಪರಿಚಯ ನೀಡಿ ಸ್ವಾಗತಿಸಿದರು. ಬಾಲಸಂರಕ್ಷಣಾ ಕೇಂದ್ರದ ವಿದ್ಯಾರ್ಥಿನಿ ಶಿವಾನಿ ಕಾರ್ಯಕ್ರಮ ನಿರ್ವಹಿಸಿದರು. ನಿಶಾ ವಂದಿಸಿದರು.

Exit mobile version