Site icon Ullalavani

ಉಳ್ಳಾಲ ಗುಂಪು ಘರ್ಷಣೆ,ಅಮಾಯಕರ ಮೇಲಿನ ಮೂಕದ್ದಮೆ ಹಿಂತೆಗೆತಕ್ಕೆಆಗ್ರಹ :ನಝೀರ್ ಉಳ್ಳಾಲ್

UN NETWORKS

ಉಳ್ಳಾಲ: ಉಳ್ಳಾಲದಲ್ಲಿ ಕೋಡಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅನಪೇಕ್ಷಿತ ಗುಂಪು ಘರ್ಷನೆಯ ಹೆಸರಿನಲ್ಲಿ ಹಿಂದೂ,ಮುಸ್ಲಿಂ ಎರಡೂ ಸಮುದಾಯದ 60ಕ್ಕೂ ಮಿಕ್ಕಿದ ಅಮಾಯಕರು ಆರೋಪಿಗಳಾಗಿ ಕೋರ್ಟ್ ಗಳಲ್ಲಿ ಅಳೆಯುತ್ತಿದ್ದು, ಉಧ್ಯೋಗ ನಷ್ಟ ಹಾಗೂ ಸಂಪಾದನೆಯು ಇಲ್ಲದೇ ಅತೀವ ಕಷ್ಟಪಡುತ್ತಿದ್ದಾರೆ. ಸರಕಾರ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಅಮಾಯಕರ ಮೇಲಿನ ಈ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕಂದು ಜಾತ್ಯತೀತ ಜನತಾದಳದ ಮುಖಂಡ ನಝೀರ್ ಉಳ್ಳಾಲ್ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ಮತ್ತು ಉಪ ಮುಖ್ಯಮಂತ್ರಿ,ಹಾಗೂ ಗೃಹ ಸಚಿವರಾದ ಪರಮೇಶ್ವರ್ ರವರನ್ನು ಆಗ್ರಹಿಸಿದ್ದಾರೆ.

ಉಳ್ಳಾಲದಲ್ಲಿ ಸದ್ಬಾವಣೆ,ಮತ್ತು ಶಾಶ್ವತ ಸೌಹಾರ್ಧತೆಯನ್ನು ಬೆಳೆಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಈ ಕುರಿತು ಪತ್ರ ಬರೆದು ಒತ್ತಾಯಿಸಿರುವ ನಝೀರ್ ಉಳ್ಳಾಲ್, ಮಂಗಳೂರು ಕ್ಷೇತ್ರದ ಶಾಸಕರೂ, ಸಚಿವರೂ,ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ರವರು ಅಮಾಯಕರ ಮೇಲಿನ ಈ ಪ್ರಕರಣವನ್ನ ಹಿಂತೆಗೆಯಲು ಮುತುವರ್ಜಿವಹಿಸಬೇಕಂದು,ವಿನಂತಿಮಾಡಿಕೊಂಡಿದ್ದಾರೆ.
ಉಳ್ಳಾಲ ಜಾತ್ಯಾತೀತ ಜನತಾದಳದ ನಿಯೋಗವು ಸಧ್ಯದಲ್ಲೇ ಮುಖ್ಯಮಂತ್ರಿಮತ್ತು ಉಪಮುಖ್ಯಮಂತ್ರಿಯವರನ್ನು ಬೇಟಿಯಾಗಿ ಮೊಕದ್ದಮೆಗಳನ್ನು ಹಿಂತೆಗೆಯಲು,ಒತ್ತಾಯಿಸಲಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version