UN NETWORKS
ಉಳ್ಳಾಲ: ಸಹನೆ, ಪ್ರೀತಿ, ತ್ಯಾಗ, ವಿಶ್ವಾಸ ದ ಜೊತೆಗೆ ಇನ್ನೊಬ್ಬರ ಕಷ್ಟವನ್ನು ಅರ್ಥೈಸಿಕೊಂಡು ಬಾಳಿಕೊಂಡು ಸಹೋದರತೆಯನ್ನು ಸಾರುವುದು ಹಬ್ಬದ ಸಂದೇಶವಾಗಿದೆ. ಪರಸ್ಪರ ತಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಶಾಂತಿಯಿಂದ ಬಾಳುವ ಮೂಲಕ ಬಲಿಷ್ಠ ಭಾರತ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಹೇಳಿದರು.
ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಇಸ್ಲಾಂಧರ್ಮದ ತತ್ವಾದರ್ಶಗಳನ್ನು ಶರೀರದಲ್ಲಿ ಅಳವಡಿಸಿಕೊಂಡು ಜೀವಿಸುವುದು ಮುಸಲ್ಮಾನರಾದ ನಮ್ಮಗುರಿಯಾಗಿದೆ. ಇಸ್ಲಾಂ ಶಾಂತಿಯಧರ್ಮ.ಜಗತ್ತಿನಲ್ಲಿ ನಾವಿರುವತನಕಅಲ್ಲಾಹನಿಗೆ ಭಯಪಟ್ಟುಜೀವಿಸಬೇಕಾಗುತ್ತದೆ. ನಮ್ಮಎಲ್ಲಾ ಕೆಡಿಕುಗಳನ್ನು ಶಮನ ಮಾಡಲುರಂಜಾನ್‍ಒಂದು ತಿಂಗಳು ಉಪವಾಸ ಆಚರಿಸಲಾಗುತ್ತದೆ.ಈ ತಿಂಗಳಲ್ಲಿ ಅಲ್ಲಾಹನಲ್ಲಿ ಪ್ರಾರ್ಥನೆ ಮಾಡಿದರೆ ನಮ್ಮ ಪಾಪಗಳನ್ನು ಅಲ್ಲಾಹನು ಮುಕ್ತಿ ಮಾಡುತ್ತಾನೆ ಎಂಬ ವಿಶ್ವಾಸ ನಮ್ಮಲ್ಲಿದೆ.ಇದಕ್ಕೆ ಉಪವಾಸ ಸಾಕ್ಷಿಯಾಗಿದೆ.ಇಸ್ಲಾಂಧರ್ಮದಲ್ಲಿದ್ದುಕೊಂಡು ಶಾಂತಿ ಸೌಹಾರ್ದತೆಯಿಂದ ನಾವು ಬದುಕಬೇಕಾಗಿದೆ
ಈ ಸಂದರ್ಭದಲ್ಲಿ ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹ ಮುಹಮ್ಮದ್, ಉಪಾಧ್ಯಕ್ಷ ಬಾವ ಮುಹಮ್ಮದ್, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಾಫ ಅಬ್ದುಲ್ಲ, ಸದಸ್ಯರಾದ ಪಾರೂಕ್ ಉಳ್ಳಾಲ್, ಮುಸ್ತಾಫ ಮಂಚಿಲ, ಅಯ್ಯೂಬ್ ಮಂಚಿಲ, ಮಹ್ಮೂದ್ ಅಳೇಕಲ, ಇಬ್ರಾಹಿಂ ಉಳ್ಳಾಲ ಬೈಲು, ನಗರಸಭಾ ಅಧ್ಯಕ್ಷರಾದ ಹುಸೈನ್ ಕುಂಞ ಮೋನು, ಮಾಜಿ ಪುರಸಭಾ ಅಧ್ಯಕ್ಷರಾದ ಬಾಜಿಲ್ ಡಿಸೋಜ, ಇಸ್ಮಾಯೀಲ್ ಅಳೇಕಲ ಮತ್ತಿತರರು ಉಪಸ್ಥಿತರಿದ್ದರು.