UN NETWORKS
ಉಳ್ಳಾಲ: ವಿದ್ಯೆಗೆ ಮಾತ್ರವಲ್ಲ, ಧಾರ್ಮಿಕ, ಸಾಮಾಜಿಕ ಎಲ್ಲ ಕ್ಷೇತ್ರಗಳಲ್ಲಿ ಅಶೋಕನಗರ ಫ್ರೆಂಡ್ಸ್ ಸರ್ಕಲ್ ನ ಯುವಕರು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಸಮಾಜ ಸೇವೆಯಲ್ಲಿ ಮುಂದುವರಿಯುತ್ತಾ ಬಡಮಕ್ಕಳಿಗೆ ಸಂಘ ದಾರಿದೀಪವಾಗುತ್ತಾ ಬೆಳೆಯಲಿ ಎಂದು ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ರಾಧಾಕೃಷ್ಣ ಹೇಳಿದರು.
ಸಂಸ್ಥೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಸಮಾಜಪೂರಕ ಕೆಲಸದಲ್ಲಿ ಭಾಗಿಯಾಗುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಗಳಿಗೆ ತಮ್ಮ ಬೆಂಬಲ ಸದಾ ಇದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯರಾದ ಕೆ.ಜಿ. ಪಾಟೀಲ್ ಮಾತನಾಡಿ ಹಿಂದಿನಿಂದಲೂ ಶಾಲೆಯ ಶೇ.95 ರಷ್ಟು ವಿದ್ಯಾರ್ಥಿಗಳಿಗೆ ಸಂಘದ ಯುವಕರು ಪುಸ್ತಕವನ್ನು ನೀಡುತ್ತಲೇ ಬಂದಿದ್ದಾರೆ. ಇದರಿಂದ ಬಡ ಮಕ್ಕಳು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ನಾಗೇಶ್ ಬಜಿಲಕೇರಿಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸೇವೆ ಇನ್ನೂ ಮುಂದುವರಿದು ವಿದ್ಯಾ ದಾನದ ಒಂದು ಭಾಗವಾಗಿ ಹೊರಹೊಮ್ಮಲಿ ಎಂದರು.
ಈ ಸಂದರ್ಭ ಅಶೋಕನಗರ ಫ್ರೆಂಡ್ಸ್ ಸರ್ಕಲ್ ಇದರ ಅಧ್ಯಕ್ಷ ರಾಕೇಶ್ ಕೋಟ್ಯಾನ್, ಖಜಾಂಚಿ ಪ್ರವೀಣ್ ಪಿಂಟೋ, ಗೀತೇಶ್, ಸುನಿಲ್ ಕುಮಾರ್, ರವಿ ಅಶೋಕನಗರ, ರಾಜೇಶ್ ಆಚಾರ್ಯ, ಭಾರತ್ ಅಶೋಕನಗರ, ನವನೀತ್ ಅಶೋಕನಗರ ಉಪಸ್ಥಿತರಿದ್ದರು.
ಪ್ರವೀಣ್.ಯಸ್.ಕುಂಪಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.