ಬಿಲ್ಲವ ಸೇವಾ ಸಮಾಜ ಕೊಲ್ಯ ಅಧ್ಯಕ್ಷರಾಗಿ ಆನಂದ ಎಸ್ ಕೊಂಡಾಣ
UllalaVani
UN NETWORKS
ಉಳ್ಳಾಲ: ಬಿಲ್ಲವ ಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾಗಿ ಆನಂದ ಎಸ್ ಕೊಂಡಾಣ ಆಯ್ಕೆಯಾಗಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಈಶ್ವರ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ 2018-19ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಗೌರವಾಧ್ಯಕ್ಷರಾಗಿ ಡಾ| ಪಿ. ರಾಮಾನುಜಂ, ಉಪಾಧ್ಯಕ್ಷರಾಗಿ ಶಶಿಕಾಂತ್ ಪರ್ಯತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎನ್. ರಾಘವ, ಜೊತೆ ಕಾರ್ಯದರ್ಶಿಯಾಗಿ ಆನಂದ ಮಲಯಾಳಕೋಡಿ, ಕೋಶಾಧಿಕಾರಿಯಾಗಿ ಜಯಂತ ಪಿ.ಎಸ್., ಕ್ರೀಡಾ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್, ಮಾಧವ ಕುಂದರ್, ಸಂಘಟನಾ ಕಾರ್ಯದರ್ಶಿಗಳಾಗಿ ಪದ್ಮನಾಭ ಕೊಲ್ಯ, ಸುರೇಶ್ ಮಾಡೂರು, ಲೋಕನಾಥ, ಸುರೇಶ್ ಬಿ., ಹರಿಶ್ಚಂದ್ರ ಅಡ್ಕ, ಪೂಜಾ ಸಂಚಾಲಕರಾಗಿ ಜಯರಾಮ ಪಿಲಿಕೂರು, ಗೋಪಾಲ ಕೊಂಡಾಣ, ದೇವದಾಸ ಮಡ್ಯಾರು, ಸಾಂಸ್ಕೃತಿಕ ಸಂಚಾಲಕರಾಗಿ ಗೋಪಾಲಕೃಷ್ಣ ಸೋಮೇಶ್ವರ, ರಮಾನಾಥ ಕೋಟೆಕಾರ್, ಪುರುಷೋತ್ತಮ ಅಡ್ಕ, ಮುತ್ತಪ್ಪ ಪೂಜಾರಿ, ಕುಸುಮಾಕರ್ ಕುಂಪಲ, ಯಕ್ಷಗಾನ ಸಂಚಾಲಕರಾಗಿ ಬಾಳಪ್ಪ ಪೂಜಾರಿ, ಶೇಷಪ್ಪ ಸುವರ್ಣ, ಉಳಿತಾಯ ನಿಧಿ ಸಂಚಾಲಕರಾಗಿ ತುಕಾರಾಮ ಎನ್., ಮಾಧವ ಪರ್ಯತ್ತೂರು, ಸಭಾಗೃಹ ಉಸ್ತುವಾರಿ ಶೇಷಪ್ಪ ಬೈದ್ಯಮನೆ, ರಾಮ ಪರ್ಯತ್ತೂರು ಇವರುಗಳನ್ನು ಆಯ್ಕೆಮಾಡಲಾಯಿತು.