UN NETWORKS
ಉಳ್ಳಾಲ: ಆ ಮನೆಯಲ್ಲಿ ಪೆರ್ನಾಲ್ ಹಬ್ಬ ಕಳೆಗುಂದಿದೆ. ಗಾಳಿ, ಮಳೆ, ಸಿಡಿಲಿಗೆ ದಂಪತಿ ಮಕ್ಕಳನ್ನು ರಕ್ಷಿಸಿ ಮುರುಕು ಮನೆಯಲ್ಲೇ ರಾತ್ರಿ ಹಗಲು ಬಾಳುವಂತಹ ದುಸ್ಥಿತಿ. ಪ್ರತಿ ಮನೆಯಲ್ಲಿ ಹಬ್ಬದ ತಯಾರಿಯ ಪೂರ್ವಭಾವಿಯಾಗಿ ಹೊಸ ಬಟ್ಟೆಬರೆಗಳನ್ನು ಖರೀದಿಸುವ ಧಾವಂತದಲ್ಲಿ ಇದ್ದರೆ, ಇಲ್ಲಿ ಮನೆಮಂದಿ ಗಾಳಿ-ಮಳೆ ನಡುವೆ ಬದುಕುವುದು ಹೇಗೆ? ನಾಳೆಯ ಊಟಕ್ಕೆ ಏನು ಮಾಡುವುದು ಅನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ.
ಹೆಲ್ಪ್ ಇಂಡಿಯಾ ಫೌಂಡೇಷನ್‍ನಿಂದ ಸಹಾಯಹಸ್ತ
ಇತ್ತೀಚೆಗೆ ರಂಝಾನ್ ಕಿಟ್ ವಿತರಿಸುತ್ತಿದ್ದ ಹೆಲ್ಪ್ ಇಂಡಿಯಾ ಫೌಂಡೇಷನ್ ಗಮನಕ್ಕೆ ಶೇಖ್ ಸಂಶುದ್ದೀನ್ ಕುಟುಂಬ ಬಂದಿದೆ. ಕುಟುಂಬ ಬದುಕುತ್ತಿರುವ ವ್ಯವಸ್ಥೆಯನ್ನು ನೋಡಿ ಸಂಸ್ಥೆಯ ಸದಸ್ಯರೇ ತಾವು ಒಟ್ಟುಗೂಡಿಸಿದ ಅಲ್ಪ ಮೊತ್ತದಲ್ಲಿ ಮನೆಯ ಬಹುತೇಕ ಕೋಣೆಗಳಿಗೆ ತಾತ್ಕಾಲಿಕ ಶೀಟುಗಳನ್ನು ಹಾಕಿ ಬಾಳುವಂತಹ ವ್ಯವಸ್ಥೆ ಮಾಡಿಕೊಟ್ಟರು. ಆದರೆ ಶೌಚಾಲಯವಿಲ್ಲದೇ ಮನೆಯ ಮೂರು ಹೆಣ್ಮಕ್ಕಳು ಸಮೀಪದ ಮನೆಗೆ ಹೋಗುವ ಅನಿವಾರ್ಯತೆ ಇದೆ. ಇಂತಹ ದುಸ್ಥಿತಿಯಲ್ಲಿರುವ ಕುಟುಂಬಕ್ಕೆ ಬಾಳುವುದೇ ಒಂದು ಸವಾಲಾಗಿದ್ದರೆ, ರಂಝಾನ್ ಶಾಪಿಂಗ್ ನಡೆಸುವವರು ಸ್ವಲ್ಪ ಮೊತ್ತವನ್ನಾದರೂ ಈ ಕುಟುಂಬಕ್ಕೆ ದಾನ ಮಾಡಿದರೆ, ಮುಂದಿನ ಹಬ್ಬವಲ್ಲ, ಬದಲಾಗಿ ಜೀವನವಿಡೀ ಸುಖದಿಂದ ಬಾಳಬಹುದು ಅನ್ನುವ ಅಭಿಪ್ರಾಯ ಫೌಂಡೇಷನ್ನಿನ ಸದಸ್ಯರದ್ದಾಗಿದೆ.
ಸಹಾಯ ಮಾಡಲು ಇಚ್ಛಿಸುವವರು
ಹೆಸರು : ಆಯಿಷತ್ ಖೈರುನ್ನೀಸಾ
ಯೂನಿಯನ್ ಬ್ಯಾಂಕ್
ದೇರಳಕಟ್ಟೆ ಬ್ರಾಂಚ್
ಅಕೌಂಟ್ ಸಂಖ್ಯೆ : 574702010005022
ಐಎಫ್‍ಎಸ್‍ಸಿ ಕೋಡ್ : ಯುಬಿಐಎನ್‍ಒ 557471