UN NETWORKS
ಕೋಟೆಕಾರು: ಶಿಕ್ಷಣಕ್ಕೆ ಸರಕಾರ ಸೇರಿದಂತೆ ಸಂಘ ಸಂಸ್ಥೆಗಳು ಉತ್ತೇಜನ ನೀಡುತ್ತಿದ್ದು, ಶಿಕ್ಷಣಕ್ಕೆ ಸಿಗುವ ಸವಲತ್ತನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉನ್ನತ ಸ್ಥಾನಕ್ಕೆ ಹೋಗುವುದರೊಂದಿಗೆ ವಿದ್ಯೆ ಕಲಿಸಿದ ಶಾಲೆ ಮತ್ತು ಸಹಕಾರ ನೀಡಿದ ಸಂಸ್ಥೆಗಳನ್ನು ಮರೆಯಬಾರದು ಎಂದು ಕೋಟೆಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ ಕನೀರುತೋಟ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಕೋಟೆಕಾರು ಪಟ್ಟಣ ಪಂಚಾಯತ್ ಕೌನ್ಸಿಲರ್‍ಗಳಾದ ಜಯಶ್ರೀ, ಪ್ರಫುಲ್ಲ ದಾಸ್ ಕನೀರುತೋಟ, ಸ್ಪೂರ್ತಿ ಸೇವಾ ಬಳಗದ ಅಧ್ಯಕ್ಷ ರಮೇಶ್ ಕೊಂಡಾಣ, ಕೊರಗಜ್ಜ ಸೇವಾ ಟ್ರಸ್ಟ್ ಅಧ್ಯಕ್ಷ ಮಾಧವ ಶೆಟ್ಟಿ ಕುಸಾಲ್‍ನಗರ, ರೋಹಿತ್ ಬಿ. ಕುಲಾಲ್ ಮಾಡೂರು, ಚಿದಾನಂದ ಮಡ್ಯಾರು, ಸಂಪತ್ ಭಂಡಾರ ಮನೆ, ಜಯಂತ್ ಕೊಂಡಾಣ, ರಮೇಶ್ ಶೆಟ್ಟಿ, ಆನಂದ ಎಂ.ಕೆ., ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಐಸಾಬಿ, ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು. ಉಪಸ್ಥಿತರಿದ್ದರು.
ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿದರು. ರೋಹಿತ್ ವಿ. ಕುಲಾಲ್ ಪ್ರಸ್ತಾವನೆಗೈದರು. ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ವೇಣುಗೋಪಾಲ್ ವಂದಿಸಿದರು.