Site icon Ullalavani

ಇಫ್ತಾರ್ ಸಂಗಮಗಳಿಂದ ಸೌಹಾರ್ಧತೆ ಹೆಚ್ಚುವಂತಾಗಲಿ : ಎ.ಕೆ.ಎಂ ಅಶ್ರಫ್

UN NETWORKS

ಮಂಜೇಶ್ವರ : ದೇಶದಾದ್ಯಂತ ಕೋಮುವಾದವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದು ಅಪಾಯಕಾರಿ ,ವಿವಿಧ ಭಾಷೆಗಳ ಸಂಸ್ಕೃತಿಯ, ಶಾಂತಿ , ಸೌಹಾರ್ಧತೆಯ ತವರೂರು ಮಂಜೇಶ್ವರ , ಮಂಜೇಶ್ವರದ ಜನತೆಯು ಸೌಹಾರ್ಧತೆಯನ್ನು ಕಾಯ್ದುಕೊಂಡು ಬಂದಿದ್ದಾರೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಹೇಳಿದ್ದಾರೆ.  ಅವರು ಮಂಜೇಶ್ವರ ಪ್ರೆಸ್ ಕ್ಲಬ್ ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿ ಆಯೋಜಿಸಿದ್ದ ಇಫ್ತಾರ್ ಸಂಗಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಂಜೇಶ್ವರ ಪ್ರೆಸ್ ಕ್ಲಬ್ ಆಯೋಜಿಸಿರುವ ಇಫ್ತಾರ್ ಸಂಗಮದಿಂದ ಮನುಷ್ಯರೊಳಗಿನ ಸೌಹಾರ್ಧತೆ ಇನ್ನಷ್ಟು ಹೆಚ್ಚುವಂತಾಗಲಿ ಎಂದು ಅವರು ಹೇಳಿದರು.

ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ರಹಿಮಾನ್ ಉದ್ಯಾವರ ಸ್ವಾಗತಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ , ಸಿ.ಪಿ.ಐ ಮುಖಂಡ ಬಿ.ವಿ ರಾಜನ್ , ಮಂಜೇಶ್ವರ ಬ್ಲಾಕ್ ಪಂಚಾಯತು ಸ್ಥಾಯೀ ಸಮಿತಿ ಸದಸ್ಯ ಮುಸ್ತಫಾ ಉದ್ಯಾವರ , ಕರ್ನಾಟಕ ಕೊಂಕಣಿ ಅಕಾಡೆಮಿ ಸದಸ್ಯ ಲಕ್ಷ್ಮಣ್ ಪ್ರಭು , ಮಂಜೇಶ್ವರ ಗ್ರಾಮ ಪಂಚಾಯತು ಸದಸ್ಯ ಫೈಝಲ್ ಮಚ್ಚಂಪಾಡಿ , ಬಿ.ಜೆ.ಪಿ ಮುಖಂಡ ಹರಿಶ್ಚಂದ್ರ ಮಂಜೇಶ್ವರ , ಮರ್ಚಂಟ್ ಯೂತ್ ವಿಂಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಬ್ಬಾರ್ ಉಪ್ಪಳ , ವ್ಯಾಪಾರಿ ಮಂಜೇಶ್ವರ ಘಟಕದ ಕಾರ್ಯದರ್ಶಿ ಹಮೀದ್ ಹೊಸಂಗಡಿ , ಯೂತ್ ಲೀಗ್ ಮಂಜೇಶ್ವರ ಮಂಡಲ ಕಾರ್ಯದರ್ಶಿ ಗೋಲ್ಡನ್ ರಹಿಮಾನ್ , ಫ್ಲಕ್ಸ್ ಪಾಯಿಂಟ್ ನ ರಫೀಕ್ ಬಾಳಿಯೂರು , ಯೂತ್ ಲೀಗ್ ಮಂಜೇಶ್ವರ ಪಂಚಾಯತು ಕಾರ್ಯದರ್ಶಿ ಮಜೀದ್ ಇಡಿಯಾ , ಡಿ.ವೈ.ಎಫ್.ಐ ಯ ಪ್ರಶಾಂತ್ ಕನಿಲ , ಮೊದಲಾದವರು ಮಾತನಾಡಿದರು.

ಈ ಸಂದರ್ಭ ಪತ್ರಕರ್ತರಾದ ಶಶಿಧರ್ ಪೊಯ್ಯತ್ತಬೈಲು , ಆಸಿಫ್ ಉಳ್ಳಾಲ , ಜಗದೀಶ್ ಪ್ರತಾಪ್ ನಗರ , ರವಿ ಪ್ರತಾಪ್ ನಗರ , ರತನ್ ಕುಮಾರ್ ಹೊಸಂಗಡಿ , ಅನೀಸ್ ಉಪ್ಪಳ , ಸನಲ್ ಕುಮಾರ್ , ಸಲಾಂ ವರ್ಕಾಡಿ ಮೊದಲಾದವರು ಉಪಸ್ತಿತರಿದ್ದರು. ಇಫ್ತಾರ್ ಸಂಗಮದಲ್ಲಿ ನೂರಾರು ಮಂದಿ ಪಾಳ್ಗೊಂಡರು.

Exit mobile version