ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷರಾಗಿ ನರಸಿಂಹ ನಾಯ್ಕ ಪುನರಾಯ್ಕೆ
UllalaVani
UN NETWORKS
ಉಳ್ಳಾಲ : ಗಾಳದ ಕೊಂಕಣಿ ಅಭ್ಯುದಯ ಸಂಘ ಮಂಗಳೂರು ಇದರ 2018-19ರ ಸಾಲಿಗೆ ನೂತನ ಅಧ್ಯಕ್ಷರಾಗಿ ನರಸಿಂಹ ನಾಯ್ಕ ಅವರು ಪುನರಾಯ್ಕೆಗೊಂಡಿದ್ದಾರೆ.
ಉಳಿದಂತೆ ಪದಾಧಿಕಾರಿಗಳಾಗಿ ರಂಜನ್ ಎಂ.ನಾಯ್ಕ್ ದೇರೆಬೈಲ್,ಧನಲಕ್ಷ್ಮಿ ಎಂ.(ಉಪಾಧ್ಯಕ್ಷರು) ಮುರಳೀಧರ ನಾಯ್ಕ (ಪ್ರಧಾನ ಕಾರ್ಯದರ್ಶಿ),ವೆಂಕಟೇಶ್ ಬಂಟ್ವಾಳ,ಆಶಾ ನಾಯ್ಕ ಗೋರಿಗುಡ್ಡೆ (ಕಾರ್ಯದರ್ಶಿಗಳು),ಚಂದ್ರಶೇಖರ್ ನಾಯ್ಕ ಬಪ್ಪಾಲ್ (ಕೋಶಾಧಿಕಾರಿ) ಆಯ್ಕೆಗೊಂಡಿದ್ದಾರೆ.ಮಂಜುನಾಥ ನಾಯ್ಕ ಸುಭಾಸ್ ನಗರ,ಇಂದುಶೇಖರ್ ಭಂಡಾರಬೈಲ್,ಮಹೇಶ್ ನಾಯ್ಕ ಬಂಟ್ವಾಳ,ಪ್ರವೀಣ್ ನಾಯ್ಕ ಬಂಟ್ವಾಳ,ಜಯಶೀಲ ಯು.ನಾಯ್ಕ ಬಜಾಲ್,ಮೋಹಿನಿ ಶೆಟ್ಟಿಬೊಟ್ಟು (ಸಂಘಟನಾ ಕಾರ್ಯದರ್ಶಿಗಳು) ಹಾಗೆಯೇ ಯೋಗೀಶ್ ನಾಯ್ಕ ಪಂಪ್ ವೆಲ್,ರಾಜೇಶ್ ನಾಯ್ಕ್ ಕೋಡಿಕಲ್,ಸುಭಾಸ್ ಕುಮಾರ್ ಬಿಜೈ,ಉಷಾ ರಂಜನ್ ದೇರೆಬೈಲ್,ಶೀಲಾ ಸುದೇಶ್ ಪಂಪ್ ವೆಲ್ ( ಕ್ರೀಡಾ ಕಾರ್ಯದರ್ಶಿಗಳು) ಉಳಿದಂತೆ33 ಮಂದಿಯನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಕಾಫಿಕಾಡ್ ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಉಮಾನಾಥ ನಾಯ್ಕ ಉಳ್ಳಾಲ ಅವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು.
ನಿಕಟಪೂರ್ವ ಪ್ರ.ಕಾರ್ಯದರ್ಶಿ ಕೋಡಿ ಜಯ ನಾಯ್ಕ ,ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿಯ ಪ್ರ.ಕಾರ್ಯದರ್ಶಿ ಯು. ದಯಾನಂದ ನಾಯ್ಕ ಶುಭ ಹಾರೈಸಿದರು.ನೂತನ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ವಂದಿಸಿದರು.