UN NETWORKS
ಮಂಗಳೂರು: ಭಾರತ ಚುನಾವಣಾ ಆಯೋಗದ ಅಧಿಸೂಚನೆಯಂತೆ ಕರ್ನಾಟಕ ನೈರುತ್ಯ ಪದವೀಧರ/ಶಿಕ್ಷಕರ ಕ್ಷೇತ್ರದ ದೈವಾರ್ಷಿಕ ಚುನಾವಣೆಗೆ ದ.ಕ.ಜಿಲ್ಲೆಯಲ್ಲಿ ಕ್ರಮವಾಗಿ ಪದವೀಧರ ಕ್ಷೇತ್ರಕ್ಕಾಗಿ 23 ಮತಗಟ್ಟೆಗಳು ಮತ್ತು ಶಿಕ್ಷಕರ ಕ್ಷೇತ್ರಕ್ಕಾಗಿ 14 ಮತಗಟ್ಟೆಗಳನ್ನು ಅಳವಡಿಸಲಾಗಿದೆ.
ಪದವೀಧರರ ಕ್ಷೇತ್ರ ಮತಗಟ್ಟೆಗಳು:
ಮುಲ್ಕಿ-ನಗರ ಪಂಚಾಯತ್ ಕಟ್ಟಡ, ಮೂಡುಬಿದಿರೆ-ಪುರಸಭೆ ಕಟ್ಟಡ (2 ಮತಗಟ್ಟೆ), ಸುರತ್ಕಲ್-ಗೋವಿಂದದಾಸ ಕಾಲೇಜು (2 ಮತಗಟ್ಟೆ), ಬಜಪೆ-ಪಂಚಾಯತ್ ಕಟ್ಟಡ, ಗುರುಪುರ- ಸರಕಾರಿ ಪದಪೂರ್ವ ಕಾಲೇಜು, ಹಂಪನಕಟ್ಟೆ-ಯುನಿವರ್ಸಿಟಿ ಕಾಲೇಜು ಮಂಗಳೂರು-(5 ಮತಗಟ್ಟೆಗಳು), ಕೊಣಾಜೆ-ವಿಶ್ವ ಮಂಗಳಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕೊಣಾಜೆ, ಬಬ್ಬುಕಟ್ಟೆ-ದ.ಕ. ಜಿಲ್ಲಾ ಪಂಚಾಯತ್ ಹೈಯರ್ ಪ್ರೈಮರಿ ಸ್ಕೂಲ್, ಬಿ.ಸಿ. ರೋಡ್-ಮಿನಿ ವಿಧಾನ ಸೌಧ ತಾಲೂಕು ಕಟ್ಟಡ (3 ಮತಗಟ್ಟೆ), ಬೆಳ್ತಂಗಡಿ-ತಾಲೂಕು ಕಚೇರಿ (2 ಮತಗಟ್ಟೆ), ಪುತ್ತೂರು-ತಾಲೂಕು ಪಂಚಾಯತ್ ಕಚೇರಿ (2 ಮತಗಟ್ಟೆ), ಸುಳ್ಯ-ತಾಲೂಕು ಕಚೇರಿ, ಪಂಜ-ನಾಡ ಕಚೇರಿ.
ಶಿಕ್ಷಕರ ಕ್ಷೇತ್ರ ಮತಗಟ್ಟೆಗಳು:
ಮುಲ್ಕಿ-ನಗರ ಪಂಚಾಯತ್, ಮೂಡುಬಿದಿರೆ-ಪುರಸಭೆ ಕಟ್ಟಡ, ಸುರತ್ಕಲ್-ಗೋವಿಂದದಾಸ ಕಾಲೇಜು, ಬಜಪೆ-ಪಂಚಾಯತ್ ಕಟ್ಟಡ, ಗುರುಪುರ-ಸರಕಾರಿ ಪದಪೂರ್ವ ಕಾಲೇಜು, ಮಂಗಳೂರು-ಯುನಿವರ್ಸಿಟಿ ಕಾಲೇಜು ಮಂಗಳೂರು-(2 ಮತಗಟ್ಟೆಗಳು), ಕೊಣಾಜೆ-ವಿಶ್ವ ಮಂಗಳಾ ಇಂಗ್ಲಿಷ್ ಮೀಡಿಯಂ ಸ್ಕೂಲು, ಬಬ್ಬುಕಟ್ಟೆ- ದ.ಕ. ಜಿಲ್ಲಾ ಪಂಚಾಯತ್ ಹೈಯರ್ ಪ್ರೈಮರಿ ಸ್ಕೂಲ್, ಬಿ.ಸಿ. ರೋಡ್-ಸಾಮರ್ಥ್ಯ ಸೌಧ ತಾಲೂಕು ಪಂಚಾಯತ್ ಕಟ್ಟಡ, ಬೆಳ್ತಂಗಡಿ-ತಾಲೂಕು ಕಚೇರಿ, ಪುತ್ತೂರು-ತಾಲೂಕು ಪಂಚಾಯತ್ ಕಚೇರಿ, ಸುಳ್ಯ-ತಾಲೂಕು ಕಚೇರಿ, ಪಂಜ-ನಾಡ ಕಚೇರಿಯಲ್ಲಿ ಮತದಾನ ನಡೆಯುತ್ತಿದೆ.
ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು:
ಅರುಣ್ ಕುಮಾರ್-ಜನತಾದಳ(ಜಾತ್ಯಾತೀತ), ಅಯನೂರು ಮಂಜುನಾಥ್-ಭಾರತೀಯ ಜನತಾ ಪಾರ್ಟಿ, ಎಸ್.ಪಿ. ದಿನೇಶ್- ಕಾಂಗ್ರೆಸ್, ಜಿ.ಸಿ. ಪಟೇಲ್-ಸರ್ವ ಜನತಾ ಪಾರ್ಟಿ, ಜಫರುಲ್ಲಾ ಸತ್ತಾರ್ ಖಾನ್-ಪಕ್ಷೇತರ, ಜಿ.ಎಂ. ಜಯಕುಮಾರ್-ಪಕ್ಷೇತರ, ಬಿ.ಕೆ. ಮಂಜುನಾಥ-ಪಕ್ಷೇತರ.
ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಗಳು:
ಕ್ಯಾ. ಗಣೇಶ್ ಕಾರ್ಣಿಕ್- ಭಾರತೀಯ ಜನತಾ ಪಾರ್ಟಿ, ಎಸ್.ಎಲ್. ಬೋಜೆಗೌಡ- ಜನತಾದಳ (ಜಾತ್ಯಾತೀತ), ಕೆ.ಕೆ. ಮಂಜುನಾಥ ಕುಮಾರ್ (ಮಾಸ್ಟರ್)- ಕಾಂಗ್ರೆಸ್, ಡಾ.ಅರುಣ್ ಹೊಸಕೊಪ್ಪ- ಪಕ್ಷೇತರ, ಅಲೋಶಿಯಸ್ ಡಿಸೋಜ- ಪಕ್ಷೇತರ, ಕೆ.ಬಿ. ಚಂದ್ರೋಜಿ ರಾವ್- ಪಕ್ಷೇತರ, ಡಿ.ಕೆ. ತುಳಸಪ್ಪ- ಪಕ್ಷೇತರ, ಅಂಪಾರ ನಿತ್ಯಾನಂದ ಶೆಟ್ಟಿ- ಪಕ್ಷೇತರ, ಪ್ರಭುಲಿಂಗ ಬಿ.ಆರ್.- ಪಕ್ಷೇತರ, ಬಸವರಾಜಪ್ಪ ಕೆ.ಸಿ. – ಪಕ್ಷೇತರ, ಎಂ. ರಮೇಶ-ಪಕ್ಷೇತರ, ರಾಜೇಂದ್ರ ಕುಮಾರ್ ಕೆ.ಪಿ. -ಪಕ್ಷೇತರ.