UN NETWORKS
ಉಳ್ಳಾಲ: ಭಾರತ ಸರಕಾರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ,ಅರಣ್ಯ ಮತ್ತು ಪರಿಸರ ಜೀವಿ ಶಾಸ್ತ್ರ ಇಲಾಖೆ ಮತ್ತು ಸೋಮೇಶ್ವರ ಗ್ರಾಮ ಪಂಚಾಯತ್ ವಯಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಉಚ್ಚಿಲ ಕಡಲ ಕಿನಾರೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಬುದವಾರ ಬೆಳಿಗ್ಗೆ ನಡೆಯಿತು.ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಎಳವೆಯಿಂದಲೇ ಸ್ವಚ್ಚತೆಯನ್ನು ತಮ್ಮ ತಮ್ಮ ಮನೆಯಿಂದ ಪ್ರಾರಂಭಿಸುವುದರಿಂದ ಪರಿಸರ ಪ್ರೇಮದ ಬಗ್ಗೆ ಆಸಕ್ತಿ ಮೂಡುತ್ತದೆ ಎಂದರು.
ತಲಪಾಡಿ ಶಾರದಾನಿಕೇತನ, ತಲಪಾಡಿ ಪ್ರೌಢ ಶಾಲೆ,ಉಚ್ಚಿಲ ಬೋವಿ ಪ್ರೌಢ ಶಾಲೆ, ಕೊಲ್ಯ ಜೋಯಿಲಾಂಡ್ ಆಂಗ್ಲ ಮಾದ್ಯಮ ಶಾಲೆ,ಉಳ್ಳಾಲ ಮೇಲಂಗಡಿ ಶಾಲೆಯ ವಿದ್ಯಾರ್ಥಿಗಳು ಕಡಲ ಕಿನಾರೆಯಲ್ಲಿ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡರು.