ಉಳ್ಳಾಲ: ರೋಟರಿ ಕ್ಲಬ್ ದೇರಳಕಟ್ಟೆ ದಶಮಾನೋತ್ಸವ “ರೋಟರಿ ಸೇವಾಶ್ರೀ ಪ್ರಶಸ್ತಿ “ರೋಟರಿ ಕ್ಲಬ್ ದೇರಳಕಟ್ಟೆಯ ದಶಮಾನೋತ್ಸವ ಕಾರ್ಯಕ್ರಮ ತೊಕ್ಕೊಟ್ಟಿನ ಅಂಬಿಕಾ ರಸ್ತೆ ಯಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ರೋಹಿನಾಥ್ ಪಿ ಮಾತನಾಡಿ ರೋಟರಿ ಕ್ಲಬ್ ದೇರಳಕಟ್ಟೆ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸೇವಾ ಕಾರ್ಯ ಎಲ್ಲಾ ಕ್ಲಬ್ ಗಳಿಗೆ ಮಾದರಿ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ್ಲಬ್ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಕಳೆದ ಹತ್ತು ವರ್ಷಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಎಲ್ಲಾ ಅಧ್ಯಕ್ಷ ,ಕಾರ್ಯದರ್ಶಿ,ನಿರ್ದೇಶಕರು,ಪದಾಧಿಕಾರಿಗಳಿಗೆ ಸರ್ವ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟೂ ಸಮಾಜ ಮುಖಿ ಕಾರ್ಯಗಳನ್ನು ಮಾಡೋಣ ಎಂದರು . ಇದೇ ಸಂಧರ್ಭ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಐವರಿಗೆ ಕ್ಲಬ್ ನ ಪ್ರತಿಷ್ಟಿತ”ರೋಟರಿ ಸೇವಾಶ್ರೀ ಪ್ರಶಸ್ತಿ” ನೀಡಿ ಗೌರವಿಸಲಾಯಿತು . ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟೀಯ ಕಬ್ಬಡ್ಡಿ ಕ್ರೀಡಾಪಟು ಗೋಪಿನಾಥ್ ಕಾಪಿಕಾಡ್, ಕೃಷಿ ಕ್ಷೇತ್ರದಲ್ಲಿ ಲೋಕನಾಥ್ ಕುತ್ತಾರ್, ವಸಂತ ಕೊಟ್ಟಾರಿ, ಸಮಾಜ ಸೇವಕ ಶ್ರೀ ಶಂಕರ ಮಣಿ, ಆರೋಗ್ಯ ಕ್ಷೇತ್ರದಲ್ಲಿ ತೇಜಾಕ್ಷಿ ಕೆ , ಇವರಿಗೆ ರೋಟರಿ ಸೇವಾಶ್ರೀ ಪ್ರಶಸ್ತೀ ನೀಡಲಾಯಿತು. ಈ ಸಂಧರ್ಭದಲ್ಲಿ ರೋಟರಿ ಸಹಾಯಕ ಗವರ್ನರ್ ರಾಜೇಂದ್ರ ಕಲ್ಬಾವಿ , ಕ್ಲಬ್ ನ ಜಿಎಸ್ಆರ್ ಡಾ.ದೇವದಾಸ್ ರೈ, ಪಿ.ಡಿ.ಶೆಟ್ಟಿ ,ಜಯಪ್ರಕಾಶ್ ರೈ,ಪುರುಷೋತ್ತಮ ಅಂಚನ್ ,ವಿಕ್ರಂ ದತ್ತಾ,ಉಪಸ್ಥಿತರಿದ್ದರು.ಡಾ ಅನಂತನ್ ಕಾರ್ಯಕ್ರಮ ನಿರ್ವಹಿಸಿದರು.
ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಿ ಡಿ ಶೆಟ್ಟಿ ಸ್ವಾಗತಿಸಿದರು. .ಡಾ.ರಾಜೇಂದ್ರ ಪ್ರಸಾದ್ ಧನ್ಯವಾದ ನೀಡಿದರು.ದೇರಳಕಟ್ಟೆ ಮತ್ತು ಬಬ್ಬೂಕಟ್ಟೆ ಸರಕಾರಿ ಶಾಲೆಯ SSLC ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಾಸ್ಕಾರ ನೀಡಲಾಯಿತು.