Site icon Ullalavani

ಉಳ್ಳಾಲ: ಎಸ್.ಎಸ್.ಎಫ್. ಆಝಾದ್ ನಗರ ಯುನಿಟ್ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

UN NETWORKS

ಉಳ್ಳಾಲ: ಉಳ್ಳಾಲ, ಎಸ್.ಎಸ್.ಎಫ್. ಆಝಾದ್ ನಗರ ಯುನಿಟ್ ವತಿಯಿಂದ ಮಾಸ್ತಿಕಟ್ಟೆ ಜಂಕ್ಷನ್‍ನಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.

ಎಸ್.ಎಸ್.ಎಫ್.ಉಳ್ಳಾಲ ಡಿವಿಜನ್ ಅಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿಜ್ಞಾನಿಗಳು,ಸಾಮಾಜಿಕ ನೇತಾರರು ಉಪವಾಸಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ,ಉಪವಾಸದಿಂದ ಮನುಷ್ಯನ ಶರೀರಕ್ಕೆ ಹಲವಾರು ಪ್ರಯೋಜನಗಳಿವೆ ಎಂದು ಅಭಿಪ್ರಾಯ ಪಟ್ಟರು.

ಎಸ್.ಎಸ್.ಎಫ್. ಆಝಾದ್ ನಗರ ಯುನಿಟ್ ಅಧ್ಯಕ್ಷ ಹಾಫಿಲ್ ಮುಯೀನ್ ರಝ ಅಂಜದಿ ಅಧ್ಯಕ್ಷತೆವಹಿಸಿದರು, ಎಸ್.ವೈ.ಎಸ್ ಜಿಲ್ಲಾ ಕೋಶಾಧಿಕಾರಿ ಹನೀಫ್, ಎಸ್.ವೈ.ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಸಯ್ಯುದ್ ಜಲಾಲ್ ತಂಙಳ್, ಎಸ್.ಎಸ್.ಎಫ್. ಉಳ್ಳಾಲ ಡಿವಿಜನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಕೋಶಾಧಿಕಾರಿ ಶರೀಫ್ ಮುಡಿಪು, ಉಳ್ಳಾಲ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟಳಿಕೆ,ಜೊತೆ ಕಾರ್ಯದರ್ಶಿ ಅಬೂಸಾಲಿ ಹರೇಕಳ, ಎಸ್.ಎಸ್.ಎಫ್ ಉಳ್ಳಾಲ ಡಿವಿಜನ್ ಕಾರ್ಯಕಾರಿ ಸದಸ್ಯ ಅಝೀಝ್ ಎಚ್.ಕಲ್ಲು, ನೌಫಲ್ ಫರೀದ್ ನಗರ, ತ್ವಾಹ ಅಹ್ಸನ್ ಉಸ್ತಾದ್ ಮಂಜನಾಡಿ, ಕುಬೈಬ್ ತಂಙಳ್ ಉಳ್ಳಾಲ, ಎಸ್.ಎಸ್.ಎಫ್ ಉಳ್ಳಾಲ ಸೆಂಟರ್ ಅಧ್ಯಕ್ಷ ಮುಸ್ತಫ ಉಳ್ಳಾಲ, ಎಸ್.ವೈ.ಎಸ್, ಮೇಲಂಗಡಿ ಬ್ರಾಂಚ್ ಅಧ್ಯಕ್ಷ ಬಶೀರ್ ಸಖಾಫಿ ಮೇಲಂಗಡಿ, ಹಸನ್ ಅಳೇಕಲ, ಟಿಂಬರ್ ಮುಸ್ತಫ, ಹಾಫಿಳ್ ಸುಹೈಲ್ ಉಸ್ತಾದ್ ಉಪಸ್ಥಿತರಿದ್ದರು.

Exit mobile version