UN NETWORKS
ಪಾವೂರು: ಸರಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶೈಕ್ಷಣಿಕ ಸವಲತ್ತನ್ನು ನೀಡುವ ಯಾದ್ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ಅಭಿಪ್ರಾಯಪಟ್ಟರು.
ಶಿಕ್ಷಣಕ್ಕೆ ಸಂಘ ಸಂಸ್ಥೆಗಳ ಸಹಕಾರ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಆದರೆ ಹಲವಾರು ಶಾಲೆಗಳನ್ನು ಗುರುತಿಸಿ ಶಿಕ್ಷಣಕ್ಕೆ ಸಹಕಾರ ನೀಡುವ ಮೂಲಕ ಈ ಸಂಸ್ಥೆ ಮಾದರಿ ಕಾರ್ಯವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಿಯಾಝ್ ಅಹ್ಮದ್ ಪಾವೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಫಿರೋಝ್ ಮಲಾರ್,ಉಪಾಧ್ಯಕ್ಷೆ ಲೀಲಾವತಿ, ಪಂಚಾಯತ್ ಸದಸ್ಯ ವಿವೇಕ್ ರೈ, ಎಮ್. ಪಿ. ಹಸನ್, ಮಾಜಿ ಸದಸ್ಯ ಮಹಮ್ಮದ್ ಬದ್ರಿಯಾ ನಗರ, ಉದ್ಯಮಿ ವಿನ್ಸೆಂಟ್ ಲೋಬೋ, ನಾರಾಯಣ ಗಾಡಿಗದ್ದೆ, ಸಂಘದ ಗೌರವ ಸಲಹೆಗಾರ ಹನೀಫ್. ಪಿ, ಜೊತೆ ಕಾರ್ಯದರ್ಶಿ ಹನೀಫ್ ಕೆ. ಎಂ ,ಸಂಘಟನಾ ಕಾರ್ಯದರ್ಶಿ ಹನೀಫ್ ಕೆ. ಹಾಗೂ ಇರ್ಫಾನ್ ಡಿ, ಸದಸ್ಯರಾದ ಅನ್ವರ್ ಎಂ ಪಿ, ರಹೀಮ್ ಎಮ್. ಕೆ, ನೌಷಾದ್ ಎಂ. ಆರ್ ಅಲ್ಲದೆ ಆಯಾ ಶಾಲೆಯ ಮುಖ್ಯೋಪಾಧ್ಯಾಯರು,ಶಿಕ್ಷಕರು ಉಪಸ್ಥಿತರಿದ್ದರು.
ಪಾವೂರು ಗ್ರಾಮದ ಎಲ್ಲಾ ಶಾಲೆಗಳ ಸುಮಾರು 400 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಿಸಾರ್ ಮಲಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.