Site icon Ullalavani

ಸ್ವಚ್ಛತೆಯ ಜನಜಾಗೃತಿಯ ಕಾಳಜಿ ಅಗತ್ಯ : ಎಂ.ಹೆಚ್ ಮಲಾರ್

UN NETWORKS

ಉಳ್ಳಾಲ: ವಿಶ್ವ ಪರಿಸರ ದಿನವನ್ನು ಜಾತಿ ಮತ ಭೇದವಿಲ್ಲದೆ ಎಲ್ಲರೂ ಆಚರಿಸಿದರೆ ಅದು ಅರ್ಥಪೂರ್ಣವಾಗುತ್ತದೆ. ಪ್ರತೀಯೋರ್ವರು ತಮ್ಮಿಂದಾಗುವ ಸ್ವಚ್ಚತೆಯ ಜನಜಾಗೃತಿ ಕಾಳಜಿಯನ್ನು ವಹಿಸಿಕೊಂಡಲ್ಲಿ ಸ್ಥಳೀಯವಾಗಿ ಯಶಸ್ವಿಯನ್ನು ಸಾಧಿಸಲು ಸಾಧ್ಯ ಎಂದು ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆ ಕೋಟೆಪುರ ಇಲ್ಲಿನ ಮುಖ್ಯ ಶಿಕ್ಷಕರಾದ ಎಂ.ಹೆಚ್ ಮಲಾರ್ ಅಭಿಪ್ರಾಯಪಟ್ಟರು.

ಉಳ್ಳಾಲ ಕೋಟೆಪುರದ ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಕರಾವಳಿ ತೀರದ ನಾವುಗಳು ನದಿ ಹಾಗೂ ಸಾಗರಗಳಿಗೆ ಕಸ ಕಡ್ಡಿ ಪ್ಲಾಸ್ಟಿಕ್ ಮೊದಲಾದ ಮಾಲಿನ್ಯ ವಸ್ತುಗಳನ್ನು ಎಸೆಯದಂತೆ ಎಚ್ಚರಿಕೆ ವಹಿಸಿದರೆ ನದಿ ಹಾಗೂ ಸಾಗರದ ಮಾಲಿನ್ಯವನ್ನು ತಡೆಗಟ್ಟಬಹುದು. ವಿದ್ಯಾರ್ಥಿಗಳ ಜಾಥವು ಕೋಟೆಪುರದ ಪರಿಸರದಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.

ಈ ಸಂದರ್ಭ ಸ್ವಚ್ಚ ಪರಿಸರದ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು.

Exit mobile version