Site icon Ullalavani

ಸ್ವ ಇಚ್ಛೆಯಿಂದ ತಂಬಾಕು ವರ್ಜನೆ ಸಾಧ್ಯ : ಡಾ| ಶಿವಕುಮಾರ್ ಹೀರೆಮಠ್

UN NETWORKS

ಉಳ್ಳಾಲ: ವ್ಯಕ್ತಿಯು ತನ್ನ ಸ್ವಂತ ಇಚ್ಚೆಯಿಂದ ನಿರ್ಧರಿಸಿದಲ್ಲಿ ತಂಬಾಕು ವರ್ಜನೆ ಸಾಧ್ಯ ಎಂದು ಕೆ.ಎಸ್.ಹೆಗ್ದೆ ಆಸ್ಪತ್ರೆಯ ಅಧೀಕ್ಷಕ ಮೇಜರ್ ಡಾ| ಶಿವಕುಮಾರ್ ಹೀರೆಮಠ್ ಅಭಿಪ್ರಾಯಪಟ್ಟರು.ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋರೋಗ ಚಿಕಿತ್ಸಾ ವಿಭಾಗದ ವತಿಯಿಂದ “ವಿಶ್ವ ತಂಬಾಕು ರಹಿತ ದಿನ” ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಂಬಾಕು ಸೇವನೆಯಿಂದ ಚಟದಿಂದ ಹೊರಬರಲು ಸಹಾಯದ ಅವಶ್ಯಕತೆಯಿದೆ. ಸಹಾಯದ ಅವಶ್ಯಕತೆಯಿದ್ದವರು ಕ್ಷೇಮದ ಮನೋರೋಗ ವಿಭಾಗದ ತಂಬಾಕು ವರ್ಜನ ಕೇಂದ್ರದ ಸಹಾಯವನ್ನು ಪಡೆಯಬಹುದು ಎಂದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕೆ ಎಸ್ ಹೆಗ್ದೆ ಆಸ್ಪತ್ರೆಯ ಕಿವಿ ಮೂಗು ಗಂಟಲು ವಿಭಾಗದ ಡಾ| ವಾದೀಶ್ ಭಟ್ ರವರು ತಂಬಾಕು ಬಳಕೆಯಿಂದ ಬಾಯಿ ಮತ್ತು ಗಂಟಲಿನ ಭಾಗಗಳಿಗೆ ಆಗುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಶ್ವಾಸಕೋಶ ವಿಭಾಗದ ಡಾ| ಗಿರಿಧರ್ ರವರು ತಂಬಾಕು ಸೇವನೆಯಿಂದ ಶ್ವಾಸಕೋಶಕ್ಕೆ ಆಗುವ ತೊಂದರೆಗಳ ಬಗ್ಗೆ ಮತ್ತು ನಿಶ್ಕ್ರಿಯ ಧೂಮಪಾನದ ಬಗ್ಗೆ ತಿಳುವಳಿಕೆ ನೀಡಿದರು.

ಹ್ರದ್ರೋಗ ವೈದ್ಯ ಡಾ| ಸುಬ್ರಮಣ್ಯ ಅವರು ತಂಬಾಕು ಸೇವನೆಯಿಂದ ಹ್ರದಯಕ್ಕೆ ಸಂಬಂಧಪಟ್ಟ ಖಾಯಿಲೆಗಳ ಬಗ್ಗೆ ತಿಳಿಸಿದರು.
ಮಾನಸಿಕ ರೋಗ ಚಿಕಿತ್ಸಾ ವಿಭಾಗದ ಸಹಪ್ರಾಧ್ಯಾಪಕ ಡಾ| ಶ್ರೀನಿವಾಸ್ ಭಟ್ ಸ್ವಾಗತಿಸಿದರು . ಡಾ| ಅರುಣ್ ಭಟ್ ವಂದಿಸಿದರು. ತಂಬಾಕು ವರ್ಜನಾ ಕೇಂದ್ರದ ಆಪ್ತ ಸಮಾಲೋಚಕಿ ಸುಲೋಚನ ಕಾರ್ಯಕ್ರಮ ನಿರೂಪಿಸಿದರು.

Exit mobile version