Site icon Ullalavani

ರಕ್ತದಾನದಿಂದ ಸಾಮಾಜಿಕ ಸಾಮರಸ್ಯ – ಡಾ. ಚೂಂತಾರು

UN NETWORKS

ಮಂಗಳೂರು: ಮಂಗಳೂರಿನ ಸರೋಜಿನಿ ಭಟ್ ಪ್ರತಿಷ್ಠಾನ, ಹವ್ಯಕ ಸಭಾ ಮಂಗಳೂರು ಆಶ್ರಯದಲ್ಲಿ ತೇಜಸ್ವಿನಿ ಆಸ್ವತ್ರೆ ಸಹಕಾರದೊಂದಿಗೆ ನಗರದ ಕದ್ರಿ ನಂತೂರಿನ ಭಾರತಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ಭಾನುವಾರ ರಕ್ತದಾನ ಶಿಬಿರ ನಡೆಯಿತು. ನಗರದ ಖ್ಯಾತ ವಕೀಲ ಕೇಶವ ನಂದೋಡಿ ಕಾರ್ಯಕ್ರಮ ಉದ್ಘಾಟಿಸಿದರು.

ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಜಿಲ್ಲಾ ಗೃಹರಕ್ಷಕದ¼ದ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಕ್ತದಾನದಿಂದ ಸಾಮರಸ್ಯ ವೃದ್ಧಿಯಾಗುತ್ತದೆ ಎಂದರು.ಮಂಗಳೂರು ಹವ್ಯಕ ಸಭಾ ಮಧ್ಯವಲಯ ಕಾರ್ಯದರ್ಶಿ ಭಾಸ್ಕರ ಹೊಸಮನೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 21ನೇ ಬಾರಿ ರಕ್ತದಾನ ಮಾಡಿದ ಜಯಪ್ರಕಾಶ್ ಅವರನ್ನು ಗೌರವಿಸಲಾಯಿತು. ಮಂಗಳೂರು ಹವ್ಯಕ ಸಭಾದ ಅಧ್ಯಕ್ಷ ಶ್ರೀಕೃಷ್ಣ ನೀರಮೂಲೆ ಕಾರ್ಯಕ್ರಮ ನಿರೂಪಿಸಿದರು.

ತೇಜಸ್ವಿನಿ ಆಸ್ವತ್ರೆಯ ಡಾ. ಶ್ರೀದೇವಿ ಮತ್ತು ತಂಡದವರು ಶಿಬಿರಕ್ಕೆ ಸಹಕರಿಸಿದರು. 20ಮಂದಿ ಶಿಬಿರದಲ್ಲಿ ರಕ್ತದಾನ ಮಾಡಿದರು.

Exit mobile version