UN NETWORKS
ಕೈರಂಗಳ:ಇಲ್ಲಿನ ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ ವತಿಯಿಂದ ಶಾಲಾ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಕೈರಂಗಳ ಅ.ಹಿ.ಪ್ರಾ ಶಾಲೆಯಲ್ಲಿ ಜರುಗಿತು.ಕಾರ್ಯಕ್ರಮಕ್ಕೆ ಜೆ.ಎಂ.ಆರ್ ಪಡಿಕ್ಕಲ್ ಖತೀಬ್ ನಾಸೀರುದ್ದೀನ್ ಮದನಿ ದುವಾ ಮೂಲಕ ಚಾಲನೆ ನೀಡಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶಿವರಾಮ್ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ಉಧ್ಘಾಟನೆಯನ್ನು,ತಾ.ಪಂ ಸದಸ್ಯರಾದ ಹೈದರ್ ಕೈರಂಗಳ ಉಧ್ಘಾಟಿಸಿ ಮಾತನಾಡುತ್ತಾ ಅಲ್-ಅಮೀನ್ ಸಂಸ್ಥೆ ಯು ನಿಷ್ಕಂಳಕ ಮನಸ್ಸಿನಿಂದ ಸಮಾಜಕ್ಕೆ ಅರ್ಪಿಸುತ್ತಿರುವ ಸೇವೆಯು ಮಹತ್ತರವಾಗಿದೆ,ಸಂಸ್ಥೆಯ ಕಾರ್ಯಚಟುವಟಿಕೆಗಳು ಶ್ಲಾಘನೀಯ ಎಂದರು.
ಬಳಿಕ ಕೈರಂಗಳ ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಶಿವರಾಮ್ ಭಟ್ ರವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.ಉಪಾಧ್ಯಕ್ಷ ಜಾಬಿರ್ ತೋಟಾಲ್ ಸ್ವಾಗತಿಸಿ ಶಿನಾನ್ ಸುಟ್ಟ ನಿರೂಪಣೆಗೈದರು.