UN NETWORKS
ಉಳ್ಳಾಲ: ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸುವುದು ಹಾಗೂ ದಕ್ಷತೆ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ದೇರಳಕಟ್ಟೆಯ ಕಣಚೂರು ವೈದ್ಯಕೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಹೇಳೀದರು.
ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಎಚ್.ಎಸ್. ವಿರೂಪಾಕ್ಷ, ವೈದ್ಯಕೀಯ ಅಧೀಕ್ಷಕ ಡಾ. ದೇವಿಪ್ರಸಾದ್ ಶೆಟ್ಟಿ, ಕೆಎಂಸಿಯ ಡಾ. ಅಣ್ಣಯ್ಯ ಕುಲಾಲ್, ಹಾಗೂ ಸಹಾಯಕ ಡೀನ್ ಡಾ. ಶ್ರೀಶ ಉಪಸ್ಥಿತರಿದ್ದರು.
ಕಾರ್ಯಗಾರ ಮುಖ್ಯ ಸಂಘಟನೆ ಕಾರ್ಯದರ್ಶಿ ಡಾ. ಶಕುಂತಲಾ ಆರ್.ರೈ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕ ಡಾ. ರೋಶನ್ ಎಸ್ ವಂದಿಸಿದರು. ಡಾ. ವರ್ಷಾ ಶೆಣೈ ಹಾಗೂ ಡಾ. ಸಹನಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜಿನ ಅಕಾಡೆಮಿಕ್ಸ್ ಡೀನ್ ಹಿರಿಯ ವೈದ್ಯೆ ಡಾ| ಶೀಲಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.