Site icon Ullalavani

ತೊಕ್ಕೊಟ್ಟು : ಅಗತ್ಯವಿರುವ ಪ್ರದೇಶದಲ್ಲಿ ತ್ವರಿತ ಕಾಮಗಾರಿಗೆ ಸಂಸದರಿಂದ ಆದೇಶ, ಕಾಮಗಾರಿಗೆ ಚಾಲನೆ

UN NETWORKS

ತೊಕ್ಕೊಟ್ಟು: ಎಡಬಿಡದೆ ಸುರಿದ ಮಳೆಯಿಂದಾಗಿ ತೊಕ್ಕೊಟ್ಟು ಜಂಕ್ಷನ್‍ನಲ್ಲಿರುವ ಪ್ರದೇಶವು ಜಲಾವೃತಗೊಂಡಿದ್ದು ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿ , ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ತುಂಬಾ ತೊಂದರೆಯಾಗಿರುವುದನ್ನು ಗಮನಿಸಿದ ಸಂಸದ ನಳಿನ್ ಕುಮಾರ್ ಕಟೀಲ್‍ರವರು ತ್ವರಿಗ ಕಾಮಗಾರಿಗೆ ಆದೇಶಿಸಿದ್ದು ಬುಧವಾರ ಕಾಮಗಾರಿ ನಡೆದಿದೆ.

ಮಂಗಳವಾರ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಮಳೆ ನೀರಿನಿಂದಾಗುತ್ತಿರುವ ತೊಂದರೆಯನ್ನು ಪರಿಶೀಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಮತ್ತು ನಗರಸಭೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಆ ಪ್ರದೇಶದ ಕಾಮಗಾರಿಗಳ ತೊಂದರೆ ಮತ್ತು ಸರಾಗವಾಗಿ ನೀರು ಹರಿದು ಹೋಗಲು ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದ್ದು ಅದರಂತೆ ಬುಧವಾರ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ನೇತೃತ್ವದಲ್ಲಿ ಕಾಮಗಾರಿಗಳು ಬಾಕಿ ಇದ್ದ ಎಲ್ಲ ಪ್ರದೇಶಗಳ ವೀಕ್ಷಣೆ ನಡೆಸಿ ತಕ್ಷಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಅಜಿತ್, ಶಿವಪ್ರಸಾದ್, ನವಯುಗ್‍ನ ಯೋಗೇಂದ್ರ ರೆಡ್ಡಿ, ಉಳ್ಳಾಲ ನಗರ ಸಭೆಯ ಅಧಿಕಾರಿಗಳಾದ ಗೋಪಾಲಕೃಷ್ಣ, ದಿನಕರ ಶೆಟ್ಟಿ, ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು, ಜೀವನ್ ಕುಮಾರ್ ತೊಕ್ಕೊಟ್ಟು, ಪುರುಷೋತ್ತಮ ಕಲ್ಲಾಪು, ಶಕ್ತಿಕೇಂದ್ರದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಮಂಚಿಲ, ಇಂಜಿನಿಯರ್ ತುಳಸಿ, ಆರೋಗ್ಯಾಧಿಕಾರಿ ರಾಜೇಶ್, ಟ್ರಾಫಿಕ್‍ನ ಜಯರಾಮ್ ಗಟ್ಟಿ ಮತ್ತು ಸಿಬ್ಬಂದಿಗಳು, ಮಾಜಿ ಕೌನ್ಸಿಲರ್ ಗಳಾದ ಲಲಿತಾ ಸುಂದರ್, ಭಗವಾನ್ ದಾಸ್, ಪ್ರಮುಖರಾದ ಸುರೇಂದ್ರ ಶೆಟ್ಟಿ, ಪ್ರಶಾಂತ್ ಕಾಪಿಕಾಡು, ರಾಜೇಶ್ ಯು.ಬಿ. ಕಿಶೋರ್ ಕುಂಪಲ ಉಪಸ್ಥಿತರಿದ್ದರು.

Exit mobile version