ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಹರೇಕಳ: ಪಾವೂರು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ | ಬಿ. ಆರ್ ಅಂಬೆಡ್ಕರ್‍ರವರ 124ನೇ ಜಯಂತಿಯನ್ನು ಆಚರಿಸಲಾಯಿತು.
ಶಾಲಾ ಮುಖ್ಯೋಪಾದ್ಯಾಯ ಕೆ. ರವೀಂದ್ರ ರೈ ಹರೇಕಳ ಅಂಬೆಡ್ಕರ್‍ರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾಂಜಲಿ ಸಮರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯೆಯನ್ನು ಅಮೂಲ್ಯ ಸಂಪತ್ತೆಂದು ಪರಿಗಣಿಸಿದ ಅಂಬೆಡ್ಕರ್‍ರವರು ಜಾತಿವಾದವನ್ನು ಮೆಟ್ಟಿ ನಿಂತ ಒರ್ವ ಮಾನವತಾವಾದಿ. ಜಾತಿ ಮುಖ್ಯವಲ್ಲ ಜೀವನದ ರೀತಿ ನೀತಿಗಳೇ ಮುಖ್ಯ. ಬದಕಿನ ಒಳ್ಳೆಯ ಸಾಧನೆಗಳು ಶ್ರೇಷ್ಠ ವ್ಯಕ್ತಿತ್ವದ ಪ್ರತೀಕವಾಗಿದ್ದು, ಅಂಬೆಡ್ಕರ್‍ರವರ ಜೀವನದ ಆದರ್ಶಗಳಾಗಿದೆಯೆಂದರು.
ಶಾಲಾ ವಿದ್ಯಾರ್ಥಿಗಳು ಅಂಬೆಡ್ಕರ್‍ರವರ ಭಾವಚಿತ್ರಕ್ಕೆ ವಂದನೆ ಸಲ್ಲಿಸಿ ಅವರ ಜೀವನದ ಆದರ್ಶಗಳನ್ನು ಮನನ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಾಪಕರು ಸಿಬ್ಬಂದಿಗಳು ಉಪಸ್ಥಿತರಿದ್ದರು, ತ್ಯಾಗಂ ಹರೇಕಳ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕೃಷ್ಣ ಶಾಸ್ತ್ರಿ ಸ್ವಾಗತಿಸಿದ್ದರು. ಕುಮದದೇವಿ ಧನ್ಯವಾದ ಸಲ್ಲಿಸಿದರು ಶ್ರೀಮತಿ ಉಷಾಲತ ಕಾರ್ಯಕ್ರಮ ನಿರ್ವಹಿಸಿದರು.