UN NETWORKS
ಉಳ್ಳಾಲ: ತುಳುನಾಡಿನ ಜನರಲ್ಲಿ ನಾವೆಲ್ಲ ತುಳುವೆರ್ ಎನ್ನುವ ಭಾವನೆ ಮೂಡಿದಾಗ ಎಲ್ಲಾ ಜಾತಿ ಧರ್ಮದ ಜನರು ಸಾಮರಸ್ಯದೊಂದಿಗೆ ಸಹಬಾಳ್ವೆ ನಡೆಸಲು ಸಾಧ್ಯ ಎಂದು ಉಳ್ಳಾಲ ವಲಯ, ಬಂಟರ ಸಂಘ ಕಟ್ಟಡ ಸಮಿತಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ ಬೊಲ್ಯಗುತ್ತು ಅಭಿಪ್ರಾಯಪಟ್ಟರು.
ಉಳ್ಳಾಲ ಭಗವತೀ ತೀಯಾ ಸಮಾಜ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ ಮಾತನಾಡಿ ಬಂಟ ಸಮಾಜದ ಬಾಂದವರು ತಮ್ಮ ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜದವರನ್ನು ವೇದಿಕೆಗೆ ತರುವ ಮೂಲಕ ಅವರಿಗೆ ಗೌರವ ನೀಡುವ ಕಾರ್ಯ ಅನುಕರಣೀಯ. ಹಿಂದೂ ಮಸಾಜದ ವೃಕ್ಷದಲ್ಲಿ ಬೇರೆ ಬೇರೆ ರೆಂಬೆಗಳ ರೂಪದಲ್ಲಿ ಜಾತಿ ವ್ಯವಸ್ಥೆಗಳಿದ್ದು, ಯಾವುದೇ ಒಂದು ರೆಂಬೆಗೂ ಹಾನಿಯಾದರೂ ಅದರಿಂದ ವೃಕ್ಷಕ್ಕೆ ನೋವು ಆದ ಹಾಗೆ ಈ ನಿಟ್ಟಿನಲ್ಲಿ ಸಹಬಾಳ್ವೆಯಿಂದ ಎಲ್ಲರು ಒಗ್ಗಟ್ಟಾಗಿ ಬಾಳಿದಾಗ ಸಮಾಜ ವ್ಯವಸ್ಥೆ ಅಭಿವೃದ್ಧಿಯಾಗಲು ಸಾಧ್ಯ ಎಂದರು. ಬಿಲ್ಲವ ಸೇವಾ ಸಂಘ ಉಳ್ಳಾಲ ಅಧ್ಯಕ್ಷ ಈಶ್ವರ ಸುವರ್ಣ ಕನೀರ್‍ತೋಟ ಮಾತನಾಡಿ ನಾರಾಯಣ ಗುರುಗಳ ಚಿಂತನೆಯಂತೆ ಎಲ್ಲಾ ಧರ್ಮ ಜಾತಿ ಒಂದೇ ಎನ್ನುವ ಕಲ್ಪನೆ ಎಲ್ಲರಲ್ಲೂ ಮೂಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಉಳ್ಳಾಲ ವಲಯ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ವಹಿಸಿ ಸಮಾಜಮುಖಿ ಚಿಂತನೆಯಿಂದ ಸಮಾಜಕ್ಕೆ ಉತ್ತಮ ಕಾರ್ಯ ನಡೆಸಿದಾಗ ನಾಯಕತ್ವ ತನ್ನಿಂತಾನೆ ಬರಲು ಸಾಧ್ಯ ಈ ನಿಟ್ಟಿನಲ್ಲಿ ಎಲ್ಲರನ್ನು ಒಂದು ಗೂಡಿಸುವ ಚಿಂತನೆ ಈ ಕಾರ್ಯಕ್ರಮದಿಂದ ಆಗಿದೆ ಎಂದರು.
ಉಳ್ಳಾಲ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀಕರ ಕಿಣಿ, ಅಂಬಿಕಾರೋಡ್ ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ ಕುತ್ತಾರು, ಬೋವಿ ಸಮಾಜ ಉಳ್ಳಾಲದ ಅಧ್ಯಕ್ಷ ಚಿದಾನಂದ ಆರ್. ಉಚ್ಚಿಲ್, ಉಳ್ಳಾಲ ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್, ಹರೇಕಳ, ವಿಶ್ವಕರ್ಮ ಸಮಾಜ, ಉಳ್ಳಾಲ ಅಧ್ಯಕ್ಷ ಸುಂದರ ಆಚಾರ್ಯ, ಮೂಲ್ಯರ ಯಾನೆ ಕುಲಾಲರ ಸಂಘ ಕೊಲ್ಯ ಅಧ್ಯಕ್ಷ ದೇವಪ್ಪ ಎಮ್. ಸೋಮೇಶ್ವರ, ದೇವಾಡಿಗ ಸಮಾಜ, ಉಳ್ಳಾಲದ ಅಧ್ಯಕ್ಷ ಸೋಮಪ್ಪ ದೇವಾಡಿಗ, ರಾಮ ಕ್ಷತ್ರೀಯ ಸೇವಾ ಸಂಘ ಉಳ್ಳಾಲದ ಅಧ್ಯಕ್ಷ ಸೀತಾರಾಮ್ ಕೊಪ್ಪಲು, ಮೊಗೇರ ಮಹಾಂಕಾಳಿ ದೈವಸ್ಥಾನ, ಮಾಡೂರಿನ ಅಧ್ಯಕ್ಷ ಎಮ್. ಬಾಬು ಕೊಂಡಾಣ ಉಪಸ್ಥಿತರಿದ್ದರು.
ಮೋಹನದಾಸ ಗಾಂಭೀರ ಬೋಳ್ಯಾರುಗುತ್ತು ಸ್ವಾಗತಿಸಿದರು. ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರ್ವಹಿಸಿದರು. ಬಿ. ವಿವೇಕ್ ಶೆಟ್ಟಿ ಬೊಲ್ಯಗುತ್ತು ಪ್ತಸ್ತಾವನೆಗೈದರು. ಸಂಜೀವ ಶೆಟ್ಟಿ ಪಡ್ಯಾರಮನೆ ವಂದಿಸಿದರು.
.