Site icon Ullalavani

ಸ್ವಾರ್ಥ ಮನೋಭಾವನೆಯ ಜೀವನ ಇಸ್ಲಾಂನಲ್ಲಿ ಯಶಸ್ವಿಯಾಗದು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ನಾವು ನಮ್ಮ ಕುಟುಂಬ ಮತ್ತು ನಮ್ಮ ಕೆಲಸದ ವಿಚಾರದಲ್ಲಿ ಸಂಕುಚಿತ ಮನೋಭಾವನೆ ಇರಬಾರದು.ಸ್ವಾರ್ಥ ಮನೋಭಾವನೆಯ ಜೀವನ ಇಸ್ಲಾಂನಲ್ಲಿ ಯಶಸ್ವಿಯಾಗದು. ಸಂಘಟಿತ ಜೀವನಕ್ಕೆ ನಾವು ಒತ್ತು ಕೊಡಬೇಕೇ ಹೊರತು ವೈಯಕ್ತಿಕ ಜೀವನಕ್ಕಲ್ಲ. ಎಂದು ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಪಿಹೇಳಿದರು.

ಅವರು ಉಳ್ಳಾಲ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಒಂಟಿ ಜೀವನಕ್ಕಿಂತ ಸಂಘಟಿತ ಜೀವನಕ್ಕೆ ಇಸ್ಲಾಂ ಶ್ರೇಷ್ಟತೆಯನ್ನು ಕಲ್ಪಿಸಿದೆ.ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಬಹಳಷ್ಟು ಬರಬಹುದು. ಅದನ್ನು ಎದುರಿಸಿಕೊಂಡು ಬರುವ ಶಕ್ತಿ ನಮ್ಮಲ್ಲಿರಬೇಕು.ಸಮಸ್ಯೆ ಇದೆ ಎಂದು ಕೌಟುಂಬಿಕ ಜೀವನವನ್ನು ದೂರಮಾಡಬೇಡಿ. ಪ್ರವಾದಿಯವರು ಇಷ್ಟಪಟ್ಟಿರುವುದು ಕೌಟುಂಬಿಕ ಜೀವನವನ್ನೇ ಹೊರತು ಒಂಟಿ ಜೀವನವನ್ನಲ್ಲ ಇಹಲೋಕ ಮತ್ತು ಪರಲೋಕ ರಕ್ಷಣೆಗೆ ನಮಗೆ ಬೇಕಾಗಿರುವುದು ಸುನ್ನತ್ ಜಮಾಅತ್. ನಾವು ಸುನ್ನತ್‍ಜಮಾಅತ್‍ನ ಸಿದ್ದಾಂತಗಳನ್ನು ಅನುಕರಣೆ ಮಾಡಿಕೊಂಡು ಜೀವಿಸಿದರೆ ಮಾತ್ರ ರಕ್ಷಣೆ ಸಿಗಬಹುದು ಎಂದು ಹೇಳಿದರು.

ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಭಾಷಣ ಮಾಡಿದರು.ಉಳ್ಳಾಲ ಖಾಝಿ ಅಸ್ಸಯ್ಯದ್ ಪಝಲ್ ಕೋಯಮ್ಮ ತಂಙಳ್ ದುವಾ ನೆರವೇರಿಸಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಯು.ಎಸ್. ಹಂಝ ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಅರೆಬಿಕ್ ಕಾಲೇಜಿನ ಪ್ರೊಫೆಸರ್ ಅಹ್ಮದ್ ಬಾವಾ ಮುಸ್ಲಿಯಾರ್, ಮುಫತ್ತಿಶ್ ಸುಲೈಮಾನ್ ಸಖಾಫಿ,ಸಯ್ಯದ್ ಮದನಿ ಕೇಂದ್ರ ಸಮಿತಿ ಸದಸ್ಯರಾದ ಬಾವಾ ಇಬ್ರಾಹಿಂ ಹಾಜಿ ಕುಂಪಲ, ಮಹಮ್ಮದ್ ಹಾಜಿ ಕೋಡಿ, ಶಾಹುಲ್ ಹಮೀದ್ ಚೆಂಬುಗುಡ್ಡೆ, ಎ.ಕೆ. ಅಹ್ಮದ್ ಬಾವ ಆಳಲ, ಸಹದುಲ್ಲಾ ಮುಸ್ಲಿಯಾರ್ ಕಿಲ್‍ರಿಯಾ, ಕಿಳ್‍ರಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್, ಉಪಾಧ್ಯಕ್ಷ ಹಸನಬ್ಬ, ಕಾರ್ಯದರ್ಶಿ ಸಹದುಲ್ಲಾ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್‍ವೇ, ಉಳ್ಳಾಲ ದರ್ಗಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಂ ಮುಕಚೇರಿ, ಮೊದಲಾದವರು ಉಪಸ್ಥಿತರಿದ್ದರು.

Exit mobile version