Site icon Ullalavani

ಜಮೀಯ್ಯತ್ತುಲ್ ಫಲಾಹ್ : ಉಚಿತ ಪುಸ್ತಕ ವಿತರಣೆ

UN NETWORKS

ಮಂಗಳೂರು :ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಅಭಿವೃಧ್ಧಿಗೆ ಅಥವಾ ವಿದ್ಯಾಭ್ಯಾಸಕ್ಕೆ ಸಮುದಾಯದ ಸಹಕಾರ ಪ್ರೋತ್ಸಾಹ ಅತೀ ಹೆಚ್ಚಾಗಿರುತ್ತದೆ.

ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಯಾದ್ಯಂತ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಯನ್ನು ಮಾತ್ರ ತನ್ನ ಧ್ಯೇಯವಾಗಿಸಿರುವ ಜಮೀಯ್ಯತ್ತುಲ್ ಫಲಾಹ್ ಸಂಸ್ಥೆಯು ಸಮುದಾಯದ ಶೈಕ್ಷಣಿಕಾಭಿವೃದ್ಧಿಗೆ ಸಹಕರಿಸುತ್ತದೆ ಎಂದು ಜಿಲ್ಲಾ ಜಮೀಯ್ಯತ್ತುಲ್ ಫಲಾಹ್ನ ಅಧ್ಯಕ್ಷರು ಹಾಗೂ ದ.ಕ.ಜಿ.ಪಂ ಸದಸ್ಯರು ಆದ ಹಾಜಿ. ಶಾಹುಲ್ ಹಮೀದ್‍ರವರು ಹೇಳಿದರು. ಅವರು ಇತ್ತೀಚಿಗೆ ಜಮೀಯ್ಯತ್ತುಲ್ ಫಲಾಹ್ ಮಂಗಳೂರು ತಾಲೂಕು ವತಿಯಿಂದ ಉಚಿತ ಪುಸ್ತಕ ವಿತರಣೆ ಮಾಡುತ್ತಾ ಮಾತನಾಡಿದ ಅವರು ಪ್ರಸಕ್ತ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ ಮುಸ್ಲಿಂ ವಿದ್ಯಾರ್ಥಿಗಳಲ್ಲಿ ತೆರ್ಗಡೆಯ ಶೇಕಡಾವಾರು ಹೆಚ್ಚಾಗಿರುವುದು ಸಂತಸ ತಂದಿದೆ.

ಈ ನಿಟ್ಟಿನಲ್ಲಿ ದ.ಕ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಜಮೀಯತ್ತುಲ್ ಫಲಾಹ್ ಸಂಸ್ಥೆಯು ಶ್ಲಾಘನೀಯ ಕಾರ್ಯವೆಸಗಿದೆ ಎಂದರು .

ಜಮೀಯ್ಯತ್ತುಲ್ ಫಲಾಹ್ ಮಂಗಳೂರು ತಾಲೂಕು ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ರವರು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಾದ ಮಹಮ್ಮದ್ ರಫೀಕ್ ಮತ್ತು ಹಂಝ ಮಿತ್ತೂರು ಉಪಸ್ಥಿತರಿದ್ದರು .ಕಾರ್ಯದರ್ಶಿ ಎಂ.ಹೆಚ್.ಮಲಾರ್ ಸ್ವಾಗತಿಸಿ ಕೋಶಾಧಿಕಾರಿ ಕೆ.ಎಂ.ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version