Site icon Ullalavani

ಯೆನೆಪೋಯ ವಿದ್ಯಾರ್ಥಿಗಳಿಂದ ಪಕ್ಷಿಗಳ ಸಂರಕ್ಷಣೆ

UN NETWORKS

ಉಳ್ಳಾಲ: ಯೆನೆಪೋಯ ವಿಶ್ವವಿದ್ಯಾನಿಲಯದ ಪರಿಸರ ಅಧ್ಯಯನ ಕೇಂದ್ರವು ವಿದ್ಯಾರ್ಥಿಗಳಲ್ಲಿ ಪಕ್ಷಿಗಳ ಸಂರಕ್ಷಣೆಗೆ ನೀರು, ಆಹಾರ ಹಾಗೂ ಮಣ್ಣಿನ ಗೂಡು ಅಳವಡಿಸುವ ಜಾಗೃತಿ ಕಾರ್ಯಕ್ರಮ ಯೆನೆಪೋಯ ವಿವಿಯಲ್ಲಿ ನಡೆಯಿತು.

ಪರಿಸರ ಅಧ್ಯಯನ ಕೇಂದ್ರದ ಸಹಾಯಕ ನಿರ್ದೇಶಕಿ ಡಾ| ಭಾಗ್ಯ ಬಿ. ಶರ್ಮ ಭೂಮಿಯು ಕೇವಲ ಮಾನವರಿಗಲ್ಲ, ಎಲ್ಲಾ ಜೀವಿಗಳಿಗೆ ಸೇರಿದ್ದು ಹಾಗೂ ಮಾನವನು ವಿವಿಧ ರೀತಿಯ ಜೀವಿಗಳೊಂದಿಗೆ ಭೂಮಿಯನ್ನು ಹಂಚಿಕೊಂಡಿರುತ್ತಾನೆ ಎಂದರು.

ಸಂಪನ್ಮೂಲ ವ್ಯಕ್ತಿ ನಿತ್ಯಾನಂದ ಶೆಟ್ಟಿ ಬದ್ಯಾರು ಮಾತನಾಡಿ ವಲಸೆ ಪಕ್ಷಿಗಳ ಸಂಖ್ಯೆಯನ್ನು ಕಡಿಮೆ ಮಾಡದೆ ಇದ್ದರೆ ನಮ್ಮ ಪರಿಸರದ ಸುತ್ತ ಹಕ್ಕಿಗಳ ಕಲರವವನ್ನು ಕೇಳಲು ಅಸಾದ್ಯ. ವಿನಾಶದ ಅಂಚಿಗೆ ಸಾಗುತ್ತಿರುವ ಪಕ್ಷಿಗಳನ್ನು ಕಾಪಾಡುವ ಜವಾಬ್ದಾರಿ ಬುದ್ಧಿವಂತ ಪ್ರಾಣಿಯದ ಮಾನವನಿಗೆ ಸೇರಿದ್ದು ಎಂದರು.

ಸಂಪನ್ಮೂಲ ವ್ಯಕ್ತಿ ರಮ್ಯ ಮಾತನಾಡಿ ಪರಿಸರ ರಕ್ಷಣೆ ನಮ್ಮ ಹೊಣೆ ಪಕ್ಷಿ ಪತಂಗಗಳ ಉಳಿವಿಗೆ ನಮ್ಮ ಪಾತ್ರ ಮಹತ್ತರವಾದದ್ದು ಅದನ್ನು ಚೆನ್ನಾಗಿ ನಿಭಾಯಿಸಬೇಕು ಎಂದರು. ದಿನದ ಕಾರ್ಯಕ್ರಮವಾಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಣ್ಣಿನ ಮಡಕೆಯ ಕೃತಕ ಗೂಡುಗಳನ್ನು ಅಳವಡಿಸಲಾಯಿತು. ಮರದ ಗೆಲ್ಲುಗಳ ಮಧ್ಯೆ ಸಣ್ಣ ಮಡಕೆಗಳನ್ನಿಟ್ಟು ಪಕ್ಷಿಗಳಿಗಾಗಿ ನೀರನ್ನು ತುಂಬಿಸುವ ಮೂಲಕ ಪಕ್ಷಿ ಸಂಕುಲ ಉಳಿಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.

Exit mobile version