Site icon Ullalavani

ಶಿವಮೊಗ್ಗ ಅಪಘಾತದಲ್ಲಿ ಮಾಡೂರು ನಿವಾಸಿ ಮೃತ್ಯು

UN NETWORKS

ಉಳ್ಳಾಲ: ಇನ್ನೋವಾ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಾಡೂರು ನಿವಾಸಿ ಶಿವಮೊಗ್ಗ ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾರೆ.

ಮಾಡೂರು ಬಲ್ಯ ನಿವಾಸಿ ಪ್ರವೀಣ್ ಅಜಿಲ ಬಲ್ಯ(35) ಮೃತರು. ಮಂಗಳೂರಿನ ಎ.ಬಿ ಶೆಟ್ಟಿ ವೃತ್ತದಲ್ಲಿರುವ ಮಾರ್ಗದರ್ಶಿ ಚಿಟ್ ಫಂಡ್ಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಸಂಸ್ಥೆಯ ಏಳು ಮಂದಿ ಸಹುದ್ಯೋಗಿಗಳೊಂದಿಗೆ ಮಂತ್ರಾಲಯ ದರ್ಶನಕ್ಕೆ ತೆರಳಿದ್ದರು. ಅಲ್ಲಿಂದ ಶುಕ್ರವಾರ ವಾಪಸ್ಸಾಗುತ್ತಿದ್ದ ಸಂದರ್ಭ ಶಿವಮೊಗ್ಗದ ಸಾಗರ ಸಮೀಪ ಇನೋವಾ ಕಾರು ಮರಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಪ್ರವೀಣ್ ಗಂಭೀರವಾಗಿ ಗಾಯಗೊಂಡಿದ್ದರು. ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದವರನ್ನು ಶಿವಮೊಗ್ಗದ ಆಸ್ಪತ್ರೆ ಗೆ ದಾಖಲಿಸಲಾಗಿತ್ತು.

ಭಾನುವಾರ ರಾತ್ರಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಕಾರಿನಲ್ಲಿ ದ್ದ ಇನ್ನೊಬ್ಬರಿಗೆ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Exit mobile version