UN NETWORKS
ಮಂಗಳೂರು: ಬಂಟ್ವಾಳದ ವಾಮದಪದವಿನ ಎಚ್.ಅಬ್ದುಲ್ ರಹಿಮಾನ್ ಹಾಗೂ ಜಮೀಳಾ ರವರ ಪುತ್ರರಾದ, ಪ್ರಸ್ತುತ ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಮುಸ್ತಫಾ ಬಸ್ತಿಕೋಡಿ ರವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
‘ King Abdul Azeez University, Jiddah’ ಇದರಲ್ಲಿ ಪ್ರಾಧ್ಯಾಪಕರಾಗಿರುವ ಡಾ.ವಸೀಂ ಅಹ್ಮದ್ ರವರ ಮಾರ್ಗದರ್ಶನದಲ್ಲಿ ಹಾಗೂ NITK ಸುರತ್ಕಲ್ ಇದರಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಚಂದ್ರಶೇಖರ್ ರವರ ಸಹಮಾರ್ಗದರ್ಶನದಲ್ಲಿ ಕಳೆದ ವರುಷ ಇದೇ ವಿಷಯದಲ್ಲಿ ‘University of central Florida, Orlando, USAಯಲ್ಲಿ ನಡೆದ ಅಂತರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ ಪ್ರಬಂಧ ಮಂಡನೆ ಮಾಡಿದ್ದರು.