Site icon Ullalavani

ಖಾದರ್ ಸೋಲಿಲ್ಲದ ಸರದಾರ-ಗುಲಾಂ ನಬಿ ಆಜಾದ್

UN NETWORKS

ಮುಡಿಪು: ಮೋದಿ ಅಲೆ ಆಸ್ತಿಯಲ್ಲ. ಮೋದಿ ಅಲೆಯಿಂದ ರಾಜಕೀಯ ಬದಲಾವಣೆ ಸಾಧ್ಯವಿಲ್ಲ. ಮಂಗಳೂರು ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಮಾಡಿರುವ ಸಾಧನೆಗೆ ಪೂರಕವಾಗಿ ಮತದಾರರು ಸ್ಪಂದಿಸಲಿದ್ದಾರೆ. ಖಾದರ್ ಸೋಲಿಲ್ಲದ ಸರದಾರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೇಂದ್ರ ಸಚಿವ ಗುಲಾಂ ನಬಿ ಅಝಾದ್ ಹೇಳಿದರು.

ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಡಿಪಿನಲ್ಲಿ ಬುಧವಾರ ರಾತ್ರಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನನಗೆ ಅಧಿಕಾರ ಕೊಡಿ. ನಾನು ವಿದೇಶದಲ್ಲಿರುವ ಕಪ್ಪು ಹಣ ತರುತ್ತೇನೆ ಎಂದು ಮೋದಿ ಹೇಳಿದ್ದರು. ಆದರೆ ಅವರಿಗೆ ಅಧಿಕಾರಕ್ಕೆ ಬಂದ ಮೇಲೆ ಈವರೆಗೆ ಕಪ್ಪು ಹಣ ಪತ್ತೆ ಮಾಡಲು ಆಗಲಿಲ್ಲ. ಅವರಿಗೆ ಭರವಸೆ ಈಡೇರಿಸಲು ಆಗಿಲ್ಲ. ಸಿದ್ದರಾಮಯ್ಯ ಸರಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಫಲವಾಗಿದೆ. ಕ್ಷೇತ್ರಕ್ಕಾಗಿ ದುಡಿದ ಖಾದರ್‍ನಂತಹ ಶಾಸಕರು, ಸಚಿವರು ನಮಗೆ ಬೇಕು. ಅವರನ್ನು ಆರಿಸಿ ಕಳುಹಿಸುವ ಕೆಲಸ ನಿಮ್ಮ ಮುಂದಿದೆ ಎಂದರು.

ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಮಾತನಾಡಿ, ಚುನಾವಣೆ ಬರುವಾಗ ಮತ ಕೇಳಲು ಎಲ್ಲರೂ ಬರುತ್ತಾರೆ. ನಮಗೆ ಮತದಾನ ಮುಖ್ಯವಲ್ಲ. ಸಾಧನೆ ಮಾಡುವ ರಾಜಕಾರಿಣಿ ಮುಖ್ಯ. ಅಂತಹ ರಾಜಕಾರಣಿ ಇದ್ದರೆ ಅದು ಖಾದರ್ ಮಾತ್ರ. ಅವರ ಕ್ಷೇತ್ರದ ಉದ್ದಗಲಕ್ಕೂ ಕೆಲಸ ಮಾಡಿದ್ದಾರೆ. ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದ ಸಚಿವರು ಅವರು. ಅಂತಹ ವ್ಯಕ್ತಿಗಳನ್ನು ನಾವು ಗುರುತಿಸಬೇಕೇ ಹೊರತು ಕೋಮುದಳ್ಳುರಿಗೆ ಆಸ್ಪದ ಕೊಡುವವರನ್ನಲ್ಲ. ಪೊಳ್ಳು ಆಶ್ವಾಸನೆ ಕೊಡುವ ನಾಯಕರು ನಮಗೆ ಬೇಕಾಗಿಲ್ಲ ಎಂದರು.

ಕಾರ್ಯಕ್ರಮದಲ್ಲಿ ವಕ್ಪ್ ಜಿಲ್ಲಾಧ್ಯಕ್ಷ ಯು.ಕೆ. ಮೋನು, ಸುರೇಶ್ ಶೆಟ್ಟಿ ಮುಂಬಯಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಮೂಡ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಂಜೇಶ್ವರ ಜಿಲ್ಲಾ ಪಂಚಾಯಿತಿ ಕ್ಷೇತ್ರ ಸದಸ್ಯ ಹರ್ಷಾದ್ ವರ್ಕಾಡಿ, ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ, ಸಿದ್ದಿಕ್ ಕಲ್ಲಿಕೋಟೆ, ಹಕೀಂ ಕಾಸರಗೋಡು, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಇಸ್ಮಾಯಿಲ್ ಮೋಂಟುಗೋಳಿ, ನಾಸಿರ್ ನಡುಪದವು, ಅಬ್ದುಲ್ ರಝಾಕ್ ಕುಕ್ಕಾಜೆ, ಪದ್ಮನಾಭ ನರಿಂಗಾನ, ಅಶೋಕ್ ಕೊಂಚಾಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Exit mobile version