Site icon Ullalavani

ಮಂಗಳೂರು ಕ್ಷೇತ್ರದ ಶಾಸಕರಿಂದ ರಾಣಿ ಅಬ್ಬಕ್ಕಳಿಗೆ ಅವಮಾನ : ನಮಿತಾ ಶ್ಯಾಂ

UN NETWORKS

ಉಳ್ಳಾಲ: ಉಳ್ಳಾಲ ವಿಧಾನ ಸಭೆಯ ಅಧಿವೇಶನದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಣಿ ಅಬ್ಬಕ್ಕಳನ್ನು ಅವಮಾನಿಸಿದಾಗ ಈ ಭಾಗದ ಶಾಸಕರು ಮೌನವಾಗಿದ್ದು ಅವರನ್ನು ಸಮರ್ಥಿಸಿ ಮಾತನಾಡಿದ್ದು ರಾಣಿ ಅಬ್ಬಕ್ಕಳಿಗೆ ಮಾತ್ರವಲ್ಲ, ಮಹಿಳೆಯರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ ಆರೋಪಿಸಿದರು.

ತೊಕ್ಕೊಟ್ಟಿನ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿರುವ ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ, ಅತ್ಯಾಚಾರ ಹಾಗೂ ಬ್ಲಾಕ್ ಮೇಲ್ ಪ್ರಕರಣ ಮುಂದೆ ನಡೆದ ಘಟನೆಗಳು ಸಚಿವ ಖಾದರ್ ಅವರ ಅಸಲು ಬಂಡವಾಳ ತೆರೆದಿಟ್ಟದೆ. ಅಪರಾಧಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರೂ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗದಂತೆ ಮಾಡಿದ ಕಾಣ ಕೈ ಯಾವುದೆಂದು ಸಚಿವರು ತಿಳಿಸಬೇಕು.

ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕಾದ ಸಚಿವರು ಆರೋಪಿಗಳ ಬೆನ್ನ ಹಿಂದೆ ನಿಂತಿರುವುದು ಹಾಗೂ ಬಳಿಕ ತನ್ನ ಪಕ್ಷದಲ್ಲಿ ಪದಾಧಿಕಾರಿ ಮಾಡಿರುವುದು ದುರಂತ. ಅಂತಹ ಶಾಸಕರಿಂದ ಮಹಿಳೆಯರ ರಕ್ಷಣೆ ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
ಮಹಿಳಾ ಸಬಲೀಕರಣ ನೆಲೆಯಲ್ಲಿ ಮಹಿಳೆಯರಿಗೆ ಪಡಿತರ ಕೇಂದ್ರ ಆರಂಭಿಸುವುದದಾಗಿ ಆಶ್ವಾಸನೆ ನೀಡಿರುವ ಸಚಿವರು ಯಾವ ಕ್ಷೇತ್ರದಲ್ಲಿ ಪಡಿತರ ಕೇಂದ್ರ ಆರಂಭಿಸಿದ್ದಾರೆ ಜನತೆಗೆ ತಿಳಿಯದು. ಉಳ್ಳಾಲ ಭಾಗದಲ್ಲಿ ಹಲವು ಚೂರಿ ಇರಿತ ಪ್ರಕರಣ ನಡೆದಿದ್ದು ಯಾವುದೇ ಪ್ರಕರಣದಲ್ಲಿ ಅಪರಾಧಿಗಳು ಪತ್ತೆಯಾಗಿಲ್ಲ. ಸಮಾಜ ಘಾತುಕರಿಗೆ, ಅಪರಾಧಿಗಳಿಗೆ ಉಳ್ಳಾಲ ಆಪ್ತ ರಕ್ಷಕ ಕ್ಷೇತ್ರವಾಗಿದೆ. ಹಲ್ಲೆಗೊಳಗಾದ ಹತ್ಯೆಗೊಳಗಾದವರನ್ನು ಅವಲಂಬಿತ ಅವರ ಪತ್ನಿ ತಾಯಿ ಹಾಗೂ ಕುಟುಂಬದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಕಲ್ಲುಹೃದಯದ ಶಾಸಕರು ಉಳ್ಳಾಲಕ್ಕೆ ಅಗತ್ಯವಿಲ್ಲ ಎಂದರು.

ಹೆಣ್ಣುಮಕ್ಕಳಿಗೋಸ್ಕರ ಸರಕಾರಿ ಕಾಲೇಜು, ಪಾಲಿಟೆಕ್ನಿಕ್, ಸರಕಾರಿ ಹಾಸ್ಟೆಲ್ ಸ್ಥಾಪಿಸದ ಮಹಿಳಾ ವಿರೋಧಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಇರುವ ಇನ್‍ಫೋಸಿಸ್‍ನಂತಹ ಸಂಸ್ಥೆಗಳಲ್ಲಿ ಸ್ಥಳೀಯ ವಿದ್ಯಾವಂತ ಹೆಣ್ಣುಮಕ್ಕಳೀಗೆ ಉದ್ಯೋಗ ದೊರಕಿಸುವಲ್ಲಿ ವಿಫಲರಾಗಿದ್ದಾರೆ.

ಗಾಂಜಾ ಮಾಫಿಯಾ ದಿಂದ ಮುಂಬರುವ ಯುವ ಪೀಳಿಗೆಗೆ ಅಪಾಯ ತಪ್ಪಿದ್ದಲ್ಲ. ಪ್ರತಿ ತಾಯಂದಿರು ಮಹಿಳೆಯರು ಈಗಲೇ ಎಚ್ಚೆತ್ತುಕೊಳ್ಳಿ. ಅಂತಹ ಚಟುವಟಿಕೆಗಳಿಗೆ ಅಭಯ ನೀಡುತ್ತಿರುವ ಶಾಸಕ ಯು.ಟಿ. ಖಾದರ್ ಅವರನ್ನು ಮನೆಗೆ ಕಳುಹಿಸಿ, ಸ್ವಚ್ಛ ಮಂಗಳೂರು, ಗಾಂಜಾ ಮುಕ್ತ ಮಂಗಳೂರು ಹಗೂ ಅಪರಾಧ ಮುಕ್ತ ಉಳ್ಳಾಲಕ್ಕಾಗಿ ಪಣತೊಟ್ಟಿರುವ ಸರ್ವರ ಒಳಿತಿಗಾಗಿ ಸೇವೆಗೈಯುತ್ತಿರುವ ಬಿಜೆಪಿ ಅಭ್ಯಥಿಋ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರನ್ನು ವಿಧಾನಸಭೆಗೆ ಕಳುಹಿಸಿ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಸುಂದರ್, ಪ್ರಧಾನ ಕಾರ್ಯದರ್ಶಿ ರಾಜೀವಿ ಕೆಂಪುಮಣ್ಣು, ಕ್ಷೇತ್ರ ಉಪಾಧ್ಯಕ್ಷೆ ಜಯಶ್ರೀ ಕರ್ಕೇರ, ಕ್ಷೇತ್ರ ಮಹಿಳಾ ಮೋರ್ಚಾ ಅಧ್ಯಕ್ಷೆ ರಮಣಿ ಸೋಮೇಶ್ವರ, ಪ್ರಧಾನ ಕಾರ್ಯದರ್ಶಿ ಶೈಲಜಾ ಪಿ. ಶೆಟ್ಟಿ, ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಶೆಟ್ಟಿ, ಮಮತಾ ಹಾಗೂ ಸಪ್ನಾ ಶೆಟ್ಟಿ ಉಪಸ್ಥಿತರಿದ್ದರು.

Exit mobile version